ಹಮಾಸ್(Hamas) ಉಗ್ರರ ವಶದಲ್ಲಿದ್ದ ಗಾಜಾ ಗಡಿಯನ್ನು ಇಸ್ರೇಲ್ ಯಶಸ್ವಿಯಾಗಿದೆ. ಆದರೆ, ಸಂಘರ್ಷದಲ್ಲಿ 3 ಸಾವಿರಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಸಂಘರ್ಷ ಇನ್ನೂ ಮುಂದುವರೆದಿದೆ.
ಅ. 7 ರಂದು ಹಮಾಸ್ ದಾಳಿಯ ನಂತರ, ಇಸ್ರೇಲಿ ಸೇನೆ ನಿರಂತರವಾಗಿ ಗಾಜಾ ಗಡಿಯಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಇಸ್ರೇಲಿ ಸೇನೆಯು ಗಾಜಾ ಗಡಿ ಪ್ರದೇಶಗಳನ್ನು ಹಮಾಸ್ ನಿಂದ ಹಿಂಪಡೆದಿದೆ ಎಂದು ತಿಳಿದು ಬಂದಿದೆ.
ಇಸ್ರೇಲ್ ಮೇಲಿನ ದಾಳಿ ವೇಳೆ ಕೆಲವು ಭಾಗಗಳನ್ನು ಕಿತ್ತು ಹಾಕಿದ್ದರು. ಇಸ್ರೇಲ್ ರಕ್ಷಣಾ ಪಡೆ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ಬೇಲಿಯಿಂದ ದೇಶದೊಳಗೆ ಒಬ್ಬ ಹಮಾಸ್ ಉಗ್ರನೂ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ. ಎರಡೂ ಕಡೆ ಸಾಯುವವರ ಸಂಖ್ಯೆ ಹೆಚ್ಚಳವಾಗಿದೆ. ಈ ಹೋರಾಟದಲ್ಲಿ 3 ಸಾವಿರಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ.
ಅಕ್ಟೋಬರ್ 10 ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಮಾಸ್ಗೆ ಎಚ್ಚರಿಕೆ ನೀಡಿ, ನಾವು ಯುದ್ಧ ಪ್ರಾರಂಭಿಸಿಲ್ಲ. ಆದರೆ ಅಂತ್ಯ ನಮ್ಮ ಕೈಯಿಂದಲೇ ಆಗುತ್ತದೆ ಎಂದು ನೇತನ್ಯಾಹು ಹೇಳಿದ್ದರು.