ತೆಹ್ರಾನ್: ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ಯುದ್ಧ ನಡೆದ ನಡುವೆಯೇ ಇರಾನ್ ಸೇನೆ ಕೂಡ ಇಸ್ರೇಲ್ ಮೇಲೆ ಯುದ್ಧ ಸಾರಿದೆ.
ಇರಾನ್ ಸೇನೆಯು ಇಸ್ರೇಲ್ ಮೇಲೆ ನೂರಾರು ಸಂಖ್ಯೆಯಲ್ಲಿ ಡ್ರೋನ್ ನಿಂದ ದಾಳಿ ನಡೆಸಿದೆ. ಹೀಗಾಗಿ ಆತಂಕ ಮನೆ ಮಾಡಿದೆ. ಇರಾನ್ ನಿಂದ ಇಸ್ರೇಲ್ ನತ್ತ 100ಕ್ಕೂ ಅಧಿಕ ಡ್ರೋನ್ ಗಳು ಹಾರುತ್ತ ಬಂದಿವೆ ಎಂದು ಇಸ್ರೇಲ್ ಮಿಲಿಟರಿ ವರದಿಯಲ್ಲಿ ಹೇಳಿದೆ.
ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ಏ.1 ರಂದು ವೈಮಾನಿಕ ದಾಳಿ ನಡೆಸಿತ್ತು. ಘಟನೆಯಲ್ಲಿ ಇಬ್ಬರು ಬ್ರಿಗೇಡಿಯರ್ ಜನರಲ್ ಸೇರಿದಂತೆ 7 ಜನ ಸೇನಾಧಿಕಾರಿಗಳು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಇರಾನ್ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಇರಾನ್ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಮುನ್ನೆಚ್ಚರಿಕೆ ನೀಡಿದ್ದರು. ಇಸ್ರೇಲ್ ರಕ್ಷಣೆಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ಘೋಷಿಸಿದ್ದರು.