ಹಮಾಸ್ ಬಂಡುಕೋರರ (Hamas Militants) ಲ್ಲಿನ ಹಿರಿಯ ಸದಸ್ಯನನ್ನು ಇಸ್ರೇಲ್ ಸೈನಿಕರು ಬಲಿ ಪಡೆದಿದ್ದಾರೆ.
ಅಬು ಮುರಾದ್ನನ್ನೇ (Abu Murad) ಇಸ್ರೇಲ್ (Israel) ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವಾಯುಸೇನೆ ನಡೆಸಿದ ಏರ್ಸ್ಟ್ರೈಕ್ನಲ್ಲಿ (Air Strike) ಹತ್ಯೆ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ ಭಯೋತ್ಪಾದಕ ಗುಂಪು ತನ್ನ ವೈಮಾನಿಕ ಚಟುವಟಿಕೆ ನಿರ್ವಹಿಸುತ್ತಿದ್ದ ಪ್ರಧಾನ ಕಚೇರಿ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅಬು ಮುರಾದ್ನನ್ನು ಹತ್ಯೆಗೈಯಲಾಗಿದೆ ಎಂದು ವರದಿ ಮಾಡಿದೆ.