ಹಲಸಿನಹಣ್ಣಿನ ಬೀಜದ ದೋಸೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ – 2 ಕಪ್
ಹಸಿ ಹಲಸಿನ ಹಣ್ಣಿನ ಬೀಜ – 10
ಶುಂಠಿ – 1 ಇಂಚು
ಹಸಿಮೆಣಸು – 1
ತೆಂಗಿನ ತುರಿ – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು 3-4 ಗಂಟೆಯವರೆಗೆ ನೆನೆಸಿಡಿ. ನಂತರ ಹಲಸಿನ ಹಣ್ಣಿನ ಬೀಜಗಳನ್ನು ಚೆನ್ನಾಗಿ ತೊಳೆದು ಅದರ ಹೊರಗಿನ ಕೆಂಪು ಪದರವನ್ನು ತೆಗೆಯಿರಿ.
ಬಳಿಕ ನೆನೆಸಿಟ್ಟ ಅಕ್ಕಿ, ಹಲಸಿನ ಹಣ್ಣಿನ ಬೀಜ, ಶುಂಠಿ, ಹಸಿಮೆಣಸು, ತೆಂಗಿನ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ.
ಕಾವಲಿಯನ್ನು ಬಿಸಿ ಮಾಡಿ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹುಯ್ದು ಎರಡೂ ಬದಿಗಳನ್ನು ಚೆನ್ನಾಗಿ ಕಾಯಿಸಿ. ಈಗ ಬಿಸಿ ಬಿಸಿ ಹಲಸಿನ ಹಣ್ಣಿನ ಬೀಜದ ದೋಸೆ ಸವಿಯಲು ಸಿದ್ಧವಾಗಿದೆ.








