ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್ ರವೀಂದ್ರ ಜಡೇಜಾ ಅವರು ತಮ್ಮ ಹೆಸರಿಗೆ ದಾಖಲೆಯೊಂದನ್ನು ಬರೆಯಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಬಾರತ ತಂಡವು ಬರೋಬ್ಬರಿ ಭಾರತ 243 ರನ್ ಗಳ ಅಂತರದ ಜಯ ಸಾಧಸಿದೆ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು 5 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಅಲ್ಲದೇ, ಕೇವಲ 15 ಎಸೆತಗಳಲ್ಲಿ ಅಜೇಯ 29 ರನ್ ಗಳನ್ನೂ ಕೂಡ ಗಳಿಸಿ, ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಈ ಗುರಿ ಬೆನ್ನಟ್ಟಿದ ಹರಿಣ ಪಡೆ ಕೇವಲ 83 ರನ್ಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಜಡೇಜಾ 5 ವಿಕೆಟ್ ಗಳಿಸಿದ್ದರಿಂದಾಗಿ ಹರಿಣ ಪಡೆ ಸುಲಭದಲ್ಲಿ ತುತ್ತಾಗುವಂತಾಗಿದೆ.
ಈ ಸಾಧನೆಯ ಮೂಲಕ ವಿಶ್ವಕಪ್ನಲ್ಲಿ ಐದು ವಿಕೆಟ್ ಉರುಳಿಸಿದ ಎರಡನೇ ಭಾರತೀಯ ಸ್ಪಿನ್ನರ್ ಎಂಬ ದಾಖಲೆಯನ್ನು ಜಡೇಜಾ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಬೌಲಿಂಗ್ ಇಳಿಯುತ್ತಿದ್ದಂತೆ ರವೀಂದ್ರ ಜಡೇಜಾ ನಾಯಕ ಟೆಂಬಾ ಬವುಮಾ ಅವರ ವಿಕೆಟ್ ಕೀಳುವುದರ ಮೂಲಕ ಖಾತೆ ಆರಂಭಿಸಿದರು. ನಂತರ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ಅವರ ವಿಕೆಟ್ ಗಳಿಸಿದರು. ಈ ಪಂದ್ಯದಲ್ಲಿ 9 ಓವರ್ ಬೌಲಿಂಗ್ ಮಾಡಿದ ಜಡೇಜಾ ಒಂದು ಮೇಡನ್ ಸೇರಿದಂತೆ 33 ರನ್ ನೀಡಿ, 5 ವಿಕೆಟ್ ಕಿತ್ತಿದ್ದಾರೆ. ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಈ ಸಾಧನೆ ಮಾಡಿದ ಭಾರತೀಯ ಸ್ಪಿನ್ನರ್ ಆಗಿದ್ದರು. ಅವರು 2011 ರ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಐದು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದರು. ಈಗ ಸ್ಪೀನ್ನರ್ ಪಟ್ಟಿಯಲ್ಲಿ ಎರಡನೇಯವರಾಗಿ ಜಡೇಜಾ ಹೆಸರು ಸೇರಿಸಿಕೊಂಡಿದ್ದಾರೆ.
ಜಡೇಜಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಐದು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಆಗಿದ್ದಾರೆ. ಸುನಿಲ್ ಜೋಶಿ ಮತ್ತು ಯುಜುವೇಂದ್ರ ಚಹಾಲ್ ಈ ಸಾಧನೆ ಮಾಡಿದ್ದರು. ಏಕದಿನ ವಿಶ್ವಕಪ್ನಲ್ಲಿ ಐದು ವಿಕೆಟ್ ಕಬಳಿಸಿದ ಏಳನೇ ಭಾರತೀಯ ಬೌಲರ್ ಜಡ್ಡು ಆಗಿದ್ದಾರೆ.