ನವರಸ ನಾಯಕನ ಹುಟ್ಟುಹಬ್ಬ : ‘ತೋತಾಪುರಿ’ ಪೋಸ್ಟರ್ ರಿಲೀಸ್..!
ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ 40 ವರ್ಷ ಇಂಡಸ್ಟ್ರಿಯಲ್ಲಿ ಮಿಂಚು ಹರಿಸಿ ತಮ್ಮದೇ ಆದ ಒಂದು ವಿಭಿನ್ನ ಇಮೇಜ್, ಫ್ಯಾನ್ ಫಾಲೋವರ್ಸ್ ನ ಹೊಂದಿರುವ @navarasanayakajaggesh ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನ ಮಾಡಿ ಜನರನ್ನ ನಕ್ಕು ನಲಿಸಿ, ಮನರಂಜಿಸಿರುವ ಜಗ್ಗೇಶ್ ಅವರಿಗೆ ಇಂದು 58ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಗಳು ಜಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಬಾಷಯಗಳನ್ನ ತಿಳಿಸುತ್ತಿದ್ದಾರೆ.
ಪವರ್ ಸ್ಟಾರ್ ಬರ್ತ್ ಡೇ : ಅಪ್ಪು ಗೆ ಯಾರೆಲ್ಲಾ ಶುಭಹಾರೈಸಿದ್ದಾರೆ..?
ಈ ನಡುವೆ ಜಗ್ಗೇಶ್ ಅವರ ಬರ್ತ್ ಡೇ ಪ್ರಯುಕ್ತ ಅವರ ಮುಂಬರು ಸಿನಿಮಾ ತೋತಾಪುರಿ ಸಿನಿಮಾ ಹೊಸ ಪೋಸ್ಟರ್ ಲಾಂಚ್ ಮಾಡಿರುವ ಸಿನಿಮಾ ತಂಡ ಬರ್ತ್ ಡೇ ಗೆ ವಿಶ್ ಮಾಡಿದೆ. ಸುರೇಶ್ ಆರ್ಟ್ಸ್ ಪ್ರೈ.ಲಿ ಬ್ಯಾನರ್ನಲ್ಲಿ ಕೆ. ಎ ಸುರೇಶ್ ಬಂಡವಾಳ ಹೂಡುತ್ತಿರುವ ತೋತಾಪುರಿ ಸಿನಿಮಾಗೆ ವಿಜಯ್ ಪ್ರಸಾದ್ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಹಿಂದೆ ನೀರ್ ದೋಸ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಜೋಡಿ ಇದೀಗ ಮತ್ತೊಮ್ಮೆ ಕಮಾಲ್ ಮಾಡಲು ಸಜ್ಜಾಗಿದೆ.