ಡೆಹ್ರಾಡೂನ್: ಲಿವ್ ಇನ್ ರಿಲೇಶನ್ ಶಿಪ್ ನೋಂದಾಯಿಸದಿದ್ದರೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.
ಉತ್ತರಾಖಂಡ (Uttarakhand)ದಲ್ಲಿ ಲಿವ್-ಇನ್ ರಿಲೇಶನ್ಶಿಪ್ನಲ್ಲಿರುವ (live-in relationships ) ವ್ಯಕ್ತಿಗಳು ಏಕರೂಪ ನಾಗರಿಕ ಸಂಹಿತೆ (Uniform Civil Code) ಕಾನೂನಾಗಿ ಬಂದ ನಂತರ ಜಿಲ್ಲಾ ಅಧಿಕಾರಿಗಳ ಹತ್ತಿರ ಈ ಕುರಿತು ನೋಂದಾಯಿಸಬೇಕು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದರೆ ಪೋಷಕರ ಒಪ್ಪಿಗೆ ಪೆಡಯಬೇಕು. ಈ ನಿಯಮ ರಾಜ್ಯದ ಹೊರಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವ ಯಾವುದೇ ಉತ್ತರಾಖಂಡದ ನಿವಾಸಿಗೂ ಅನ್ವಯಿಸುತ್ತದೆ ಎನ್ನಲಾಗಿದೆ.
ಒಬ್ಬ ಸಂಗಾತಿ ವಿವಾಹಿತನಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ, ಒಬ್ಬ ಸಂಗಾತಿ ಅಪ್ರಾಪ್ತ ವಯಸ್ಕನಾಗಿದ್ದರೆ ಮತ್ತು ಒಬ್ಬ ಸಂಗಾತಿಯ ಒಪ್ಪಿಗೆಯನ್ನು “ಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆ ನೋಂದಣಿ ಆಗುವುದಿಲ್ಲ. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ, ಪೊಲೀಸರಿಂದ ತನಿಖೆ ನಡೆಸಲಾಗುತ್ತದೆ. ಆದರೆ, ಲಿವ್ ಇನ್ ಸಂಬಂಧ ಘೋಷಿಸದಿದ್ದರೆ ಅಥವಾ ತಪ್ಪು ಮಾಹಿತಿ ನೀಡಿದರೆ, ಮೂರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ 25 ಸಾವಿರ ವರೆಗೆ ದಂಡ ವಿಧಿಸಬಹುದು.