ಜಮ್ಮು ಕಾಶ್ಮೀರದ ಸರ್ಕಾರಿ ಕಟ್ಟಡ, ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಲೆಫ್ಟಿನೆಂಟ್ ಗವರ್ನರ್ ಆದೇಶ
ಜಮ್ಮು – ಕಾಶ್ಮೀರ: ಜಮ್ಮು-ಕಾಶ್ಮೀರದ ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ 15 ದಿನಗಳ ಒಳಗಾಗಿ ರಾಷ್ಟ್ರಧ್ವಜ ಹಾರಿಸಬೇಕೆಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೌದು.. ಈ ಕುರಿತು ಜಿಲ್ಲಾಧಿಕಾರಿಗಳು, ವಿಭಾಗೀಯ ಆಯುಕ್ತರು ಹಾಗೂ ಪೊಲೀಸ್ ಸುಪರಿಂಟೆಂಡೆಂಟ್ ಗಳ ಜತೆ ಸಭೆ ನಡೆಸಿ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮದ ಅಡಿ ನಡೆಯುತ್ತಿರುವ ಚಟುವಟಿಕೆಗಳ ಪರಾಮರ್ಶೆ ನಡೆಸಿದರು. ಬಳಿಕ ಸರ್ಕಾರಿ ಕಟ್ಟಡ ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತ ಸೂಚನೆಯನ್ನೂ ನೀಡಿದ್ದಾರೆ.
ರಾಜ್ಯಪಾಲರ ಸೂಚನೆಯನ್ನು ಪಾಲಿಸುವಂತೆ ವಿಭಾಗೀಯ ಆಯುಕ್ತರ ಕಚೇರಿಯು ಕೇಂದ್ರಾಡಳಿತ ಪ್ರದೇಶದ ಎಲ್ಲ ಉಪ ಆಯುಕ್ತರು ಮತ್ತು ವಿಭಾಗ ಮುಖ್ಯಸ್ಥರಿಗೆ ಆದೇಶಿಸಿದೆ ಎನ್ನಲಾಗಿದೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರವು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಡಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.
‘ಆಜಾದಿ ಕಾ ಅಮೃತ್ ಮಹೋತ್ಸವ್’ಗೆ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದರ ಅಂಗವಾಗಿ 2022ರ ಆಗಸ್ಟ್ 15ರ ವರೆಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
‘ಬಿಜೆಪಿ ಗೆದ್ರೆ ರಾಜ್ಯದ ಜನರನ್ನ ಹೊರಹಾಕ್ತಾರೆ.. ಪೊರಕೆ ಸೌಟೇ ಅವರಿಗೆ ಪಾಠ ಕಲಿಸುತ್ತೆ : ದೀದಿ ಕೆಂಡಾಮಂಡಲ..!
ವಾಹ್ಹ್ … ಆರು ಎಸೆತಗಳಲ್ಲಿ ಆರು ಸಿಕ್ಸರ್.. ಸಿಕ್ಸರ್ ಕಿಂಗ್ಸ್ ಸಾಲಿಗೆ ಲಂಕಾ ಕ್ರಿಕೆಟಿಗ..!
ಐಪಿಎಲ್ ನಡೆಯುತ್ತಾ..? ಕ್ರಿಕೆಟ್ ಜಾತ್ರೆಗೆ ನೈಟ್ ಕರ್ಫ್ಯೂ ಅಡ್ಡಿಯಾಗುತ್ತಾ..?