Jammu Accident: ಕಣಿವೆಗೆ ಬಿದ್ದ ಕಾರು ಒಂದೇ ಕುಟುಂಬದ ನಾಲ್ವರು ಮೃತ…
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಕಣಿವೆಗೆ ಬಿದ್ದು ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಉಧಂಪುರ ಜಿಲ್ಲೆಯ ಚೆನಾನಿ ಪ್ರದೇಶದ ಪ್ರೇಮ್ ಮಂದಿರದ ಬಳಿ ಅಪಘಾತ ಸಂಭವಿಸಿದೆ. ರಾಂಬನ್ ಜಿಲ್ಲೆಯ ಗುಲ್-ಸಂಗಲ್ದನ್ ಗ್ರಾಮದಿಂದ ಜಮ್ಮುವಿಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ನಿಯಂತ್ರಣ ತಪ್ಪಿ 700 ಅಡಿ ಕಣಿವೆಗೆ ಬಿದ್ದಿದೆ ಎಂದು ಹೇಳಿದರು. ಅಪಘಾತದಲ್ಲಿ ಜಾಮಿಯಾ ಮಸೀದಿ ಇಮಾಮ್ ಮುಫ್ತಿ ಅಬ್ದುಲ್ ಹಮೀದ್ (32) ಮತ್ತು ಅವರ ತಂದೆ ಮುಫ್ತಿ ಜಮಾಲ್ ದಿನ್ (65) ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಅವರ ತಾಯಿ ಹಜ್ರಾ ಬೇಗಂ (60) ಮತ್ತು ಸೋದರಳಿಯ ಆದಿಲ್ ಗುಲ್ಜಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
Jammu Accident: Four members of the same family were killed when a car fell into the valley.