ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕ ದಾಳಿ ….
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೊಮ್ಮೆ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಅನಂತನಾಗ್ ಜಿಲ್ಲೆಯ ಬೋಂಡಿಯಾಲ್ಗಾಂನಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ದಾಳಿಯಲ್ಲಿ ಇಬ್ಬರೂ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಬ್ಬರೂ ಕಾರ್ಮಿಕರು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಕಾರ್ಮಿಕರು ಬಿಹಾರ ಮತ್ತು ನೇಪಾಳದ ನಿವಾಸಿಗಳು. ಅವರು ಬೊಂಡಿಯಾಲ್ಗಾಮ್ನ SAPS ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಪೂಂಚ್ ಸೆಕ್ಟರ್ ನಲ್ಲಿ 3 ಉಗ್ರರನ್ನು ಹತ್ಯೆ
ಈ ದಾಳಿಗೂ ಮುನ್ನ ಗುರುವಾರ ಪೂಂಚ್ ಸೆಕ್ಟರ್ನಲ್ಲಿ ಉಗ್ರರ ಒಳನುಸುಳಲು ಯತ್ನಿಸಿದ್ದರು. ಈ ನಡುವೆ ಭಾರತೀಯ ಭದ್ರತಾ ಪಡೆಗಳು ಗುಂಡಿ ನ ದಾಳಿ ನಡೆಸಿದ್ದು, ಈ ವೇಳೆ ಮೂವರು ಉಗ್ರರನ್ನ ಬಲಿ ಪಡೆದಿದ್ದಾರೆ.
Jammu Kashmir: Terrorist attack on migrant workers in Kashmir…