ಪರಮಾಣು ಶಕ್ತಿ ಉದ್ಯಮವನ್ನ ಪುನರ್ಜೀವನಗೊಳಿಸಲು ಜಪಾನ್ ಪ್ರಧಾನಿ ಕರೆ…
ಉಕ್ರೇನ್ ರಷ್ಯಾದ ನಡುವಿನ ಯುದ್ಧದ ನಂತರರ ಇಂಧನ ಆಮದುಗಳ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ಪರಮಾಣು ಶಕ್ತಿ ಉದ್ಯಮವನ್ನ ಪುನರ್ಜಿವನ ಗೊಳಿಸಲು ಜಪಾನ್ ಪ್ರಧಾನ ಮಂತ್ರಿ ಕರೆ ನೀಡಿದ್ದಾರೆ.
2011 ರಲ್ಲಿ ಪುಕುಶಿಮಾ ದುರಂತದ ನಂತರ ಸುರಕ್ಷತೆಯ ಕಾರಣದಿಂದಾಗಿ ಹಲವಾರು ಪರಮಾಣು ರಿಯಾಕ್ಟರ್ ಗಳನ್ನ ಜಪಾನ್ ಸ್ಥಗಿತಗೊಳಿಸಿತ್ತು.
ಆದರೆ ಅನೇಕ ದೇಶಗಳಂತೆ, 2050 ರ ವೇಳೆಗೆ ಇಂಗಾಲವನ್ನ ತಟಸ್ಥಗೊಳಿಸುವ ಗುರಿಯನ್ನ ಜಪಾನ್ ಸಹ ಹೊಂದಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರದಿಂದ ಇಂಧನ ಶಕ್ತಿಯ ಪೂರೈಕೆ ಮೇಲೆ ತೊಂದರೆ ಅನುಭವಿಸುತ್ತಿದೆ.
ಇಂಧನ ನೀತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ ನಂತರ ವಿಶ್ವದ ಇಂಧನ ಬಿಕ್ಕಟ್ಟು ವ್ಯಾಪಕವಾಗಿ ಹೆಚ್ಚಾಗಿದೆ. ಆದ್ದರಿಂದ ಜಪಾನ್ ಸಂಭಾವ್ಯ ಬಿಕ್ಕಟ್ಟಿನ ಸನ್ನಿವೇಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಮುಂದಿನ ಪೀಳಿಗೆಯ ಪರಮಾಣು ರಿಯಾಕ್ಟರ್ಗಳನ್ನು ನಿರ್ಮಿಸಲು ಜಪಾನ್ ಪರಿಗಣಿಸಬೇಕು ಎಂದು ಅವರು ಹೇಳಿದರು. ಹನ್ನೊಂದು ವರ್ಷಗಳ ನಂತರ, ಜಪಾನ್ನ 33 ಪರಮಾಣು ರಿಯಾಕ್ಟರ್ಗಳಲ್ಲಿ 10 ಮತ್ತೆ ಕಾರ್ಯರೂಪಕ್ಕೆ ಬಂದಿವೆ, ಆದಾಗ್ಯೂ ಎಲ್ಲವೂ ವರ್ಷಪೂರ್ತಿ ಕಾರ್ಯನಿರ್ವಹಿಸುವುದಿಲ್ಲ. ರಾಷ್ಟ್ರೀಯ ಪರಮಾಣು ಸುರಕ್ಷತಾ ವಾಚ್ಡಾಗ್ ಇನ್ನೂ ಏಳು ರಿಯಾಕ್ಟರ್ಗಳ ಪುನರಾರಂಭವನ್ನು ತಾತ್ವಿಕವಾಗಿ ಅನುಮೋದಿಸಿದೆ.