Jasprit Bumrah | ಭುವಿ ದಾಖಲೆ ಮುರಿದ ಬುಮ್ರಾ..!!!
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾಂಡಿಂಗ್ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ದಾಖಲೆಗಳ ಬೇಟೆ ಮುಂದುವರೆಸಿದ್ದಾರೆ.
ಈ ಪಂದ್ಯದಲ್ಲಿ ಈಗಾಗಲೇ ವಿಶ್ವದಾಖಲೆ ನಿರ್ಮಿಸಿರುವ ಬುಮ್ರಾ, ಇದೀಗ ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಈ ಸೀರಿಸ್ ನಲ್ಲಿ ಇಲ್ಲಿಯವರೆಗೂ 21 ವಿಕೆಟ್ ಗಳನ್ನು ಪಡೆದಿರುವ ಬುಮ್ರಾ, ಇಂಗ್ಲೆಂಡ್ ನೆಲದಲ್ಲಿ ಐದು ಟೆಸ್ಟ್ ಸಿರೀಸ್ ನಲ್ಲಿ ಅತ್ಯಧಿಕ ವಿಕೆಟ್ ಗಳನ್ನು ಪಡೆದ ಭಾರತದ ವೇಗದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
2014ರ ಸಿರೀಸ್ ನಲ್ಲಿ ಭುವನೇಶ್ವರ್ ಕುಮಾರ್ 19 ವಿಕೆಟ್ ಪಡೆದುಕೊಂಡಿದ್ದರು.
ಇದು ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬೌಲರ್ ತೆಗೆದ ಅತ್ಯಧಿಕ ವಿಕೆಟ್ ಗಳ ಸಂಖ್ಯೆ.
2007ರಲ್ಲಿ ಜಹೀರ್ ಖಾನ್ 18 ವಿಕೆಟ್, 2018ರಲ್ಲಿ ಇಶಾಂತ್ ಶರ್ಮಾ 18 ವಿಕೆಟ್, 1959ರಲ್ಲಿ ಸುಭಾಶ್ ಗುಪ್ತೆ 17 ವಿಕೆಟ್ ಪಡೆದುಕೊಂಡಿದ್ದರು.
ಇನ್ನು ಈ ಪಂದ್ಯದಲ್ಲಿ ಬುಮ್ರಾ ಆಲ್ ರೌಂಡ್ ಪ್ರದರ್ಶ ನೀಡಿದ್ದಾರೆ.
ಬ್ಯಾಟಿಂಗ್ ನಲ್ಲಿ ಕೇವಲ 16 ಎಸೆತಗಳಲ್ಲಿ 31 ರನ್ ಗಳಿಸಿದ್ದ ಬುಮ್ರಾ ಬೌಲಿಂಗ್ ನಲ್ಲಿ ಮೂರು ಪ್ರಮುಖ ವಿಕೆಟ್ ತೆಗೆದಿದ್ದಾರೆ.
ಫೀಲ್ಡಿಂಗ್ ನಲ್ಲೂ ಕೂಡ ಮಿಂಚಿದ್ದಾರೆ.