ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸಿಡಿದ ಜಯಾ ಬಚ್ಚನ್..!
ಇತ್ತೀಚೆಗೆ ಸದನದಲ್ಲಿ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ವಿಧಾನಸಭೆಯಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿದ್ರು.. ಈ ಹೇಳಿಕೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.. ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ರಮೇಶ್ ಕುಮಾರ್ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು.. ಇದೀಗ ರಮೇಶ್ ಅವರ ಈ ಹೇಳಿಕೆಗೆ ಸಂಸದೆ ಜಯಾ ಬಚ್ಚನ್ ಆಕ್ರೋಶ ಹೊರಹಾಕಿದ್ದಾರೆ.. ಅತ್ಯಾಚಾರವನ್ನು ತಡೆಯಲು ಆಗದಿದ್ದಾಗ ಸುಮ್ಮನೆ ಮಲಗಿ ಅದನ್ನು ಎಂಜಾಯ್ ಮಾಡಬೇಕು ಎಂಬರ್ಥದಲ್ಲಿ ರಮೇಶ್ ಕುಮಾರ್ ಅವರು ಮಾತನಾಡಿದ್ರು.. ಈ ವೇಳೆ ರಮೇಶ್ ಕುಮಾರ್ ಅವರ ಮಾತಿಗೆ ಸದನದಲ್ಲಿದ್ದವರು ಜೋರಾಗಿ ನಕ್ಕಿದ್ದರು.. ಅಲ್ದೇ ಸ್ಪೀಕರ್ ಕಾಗೇರಿ ಸಹ ನಕ್ಕಿದ್ದರು.. ಆದರೆ ನಂತರ ರಮೇಶ್ ಕುಮಾರ್ ಅವರ ಈ ಹೇಳಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು. ರಮೇಶ್ ಕುಮಾರ್ ಅವರು ಕ್ಷಮೆಯಾಚಿಸಿದ್ರೂ ಕೂಡ..
ನಿಕ್ ಪತ್ನಿ ಎಂದು ವರದಿ ಮಾಡಿದ ಪತ್ರಿಕೆ ವಿರುದ್ಧ ಸಿಡಿದ ಪಿಗ್ಗಿ..!
ಆದ್ರೆ ರಮೇಶ್ ಕುಮಾರ್ ಅವರ ವಿರುದ್ಧ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮಾತನಾಡಿ , ಅದೊಂದು ನಾಚಿಕೆಗೇಡಿನ ಸಂಗತಿ, ನಾಚಿಕೆಗೇಡಿನ ವರ್ತನೆ. ಕಾಂಗ್ರೆಸ್ ಪಕ್ಷವು ಆ ಶಾಸಕನ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಆ ಮೂಲಕ ಎಲ್ಲರಿಗೂ ಮಾದರಿಯಾಗಬೇಕು. ಯಾರೂ ಇನ್ನು ಮುಂದೆ ಹೀಗೆ ಮಾತನಾಡುವ ಧೈರ್ಯ ಮಾಡಬಾರದು. ಸದನದಲ್ಲಿ ಈ ರೀತಿ ಮಾತನಾಡುವುದಿರಲಿ, ಯೋಚನೆ ಸಹ ಮಾಡಬಾರದು ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇದೊಂದು ನೀಚ ಘಟನೆ. ಈ ರೀತಿಯ ಯೋಚನೆಯುಳ್ಳ ಜನರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಅರ್ಹತೆ ಸಹ ಇಲ್ಲ. ಆಡಿದ ಮಾತು ಹಿಂಪಡೆಯಲು ಸಾಧ್ಯವಿಲ್ಲ. ಅವರ ಪಕ್ಷವು ಆ ಶಾಸಕನ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.