Wasim Jaffer : ಟೆಸ್ಟ್ ನಲ್ಲಿ ಆತ ಸಚಿನ್ ದಾಖಲೆ ಮುರಿಯಬಲ್ಲ
ಟೆಸ್ಟ್ ನಲ್ಲಿ ಅಬ್ಬರಿಸುತ್ತಿರುವ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ವಸೀಂ ಜಾಫರ್ ಪ್ರಸಂಶೆಗಳ ಸುರಿಮಳೆಗೈದಿದ್ದಾರೆ.
ಟೆಸ್ಟ್ ನಲ್ಲಿ ಸಚಿನ್ ತೆಂಡ್ಯುಲ್ಕರ್ ಅವರ ಅತ್ಯಧಿಕ ರನ್ ಗಳ ದಾಖಲೆಯನ್ನು ಜೋ ರೂಟ್ ಬ್ರೇಕ್ ಮಾಡಬಲ್ಲ ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಐದಾರು ವರ್ಷಗಳ ಕಾಲ ರೂಟ್ ಇದೇ ಫಾರ್ಮ್ ನಲ್ಲಿದ್ದರೇ ಈ ಸಾಧನೆ ಮಾಡಲಿದ್ದಾರೆ ಎಂದು ಜಾಫರ್ ತಿಳಿಸಿದ್ದಾರೆ.
ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರೂಟ್ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ.

ಎರಡನೇ ಇನ್ನಿಂಗ್ಸ್ ನಲ್ಲಿ 144 ರನ್ ಗಳನ್ನು ಗಳಿಸಿದ್ದರು. ಈ ಐದು ಮ್ಯಾಚ್ ಗಳ ಸಿರೀಸ್ ನಲ್ಲಿ ರೂಟ್ 737 ರನ್ ಗಳಿಸಿದ್ದಾರೆ.
ಅದೇ ರೀತಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರೂಟ್ ರಫ್ ಆಡಿದ್ದರು. ಈ ಸರಣಿಯಲ್ಲಿ ರೂಟ್ 396 ರನ್ ಗಳಿಸಿದ್ದರು.
ಅವರ ಇನ್ನಿಂಗ್ಸ್ ನಲ್ಲಿ ಎರಡು ಸೆಂಚೂರಿ, ಒಂದು ಅರ್ಧಶತಕ ಇದೆ. ರೂಟ್ ಗೆ ಪ್ರಸ್ತುತ 31 ವರ್ಷ ವಯಸ್ಸು.
ಆದ್ರೆ ಇಂಗ್ಲೆಂಡ್, ಆಸೀಸ್ ಕ್ರಿಕೆಟರ್ಸ್ ಬೇಗ ತಮ್ಮ ಕೆರಿಯರ್ ಮುಗಿಸುತ್ತಿರುತ್ತಾರೆ.
ಆದ್ರೆ ರೂಟ್ ಇನ್ನ 5-6 ವರ್ಷ ಕ್ರಿಕೆಟ್ ಆಡಿದರೆ ಸಚಿನ್ ದಾಖಲೆ ಬ್ರೇಕ್ ಆಗಬಹುದು ಎಂದು ಜಾಫರ್ ಹೇಳಿದ್ದಾರೆ.