ಕುಮಾರಸ್ವಾಮಿಗೆ ಭಗವಂತ ಬುದ್ಧಿ ಕೊಡಲಿ : ಕೆ.ಎಸ್.ಈಶ್ವರಪ್ಪ
ಗದಗ : ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಕುಮಾರಸ್ವಾಮಿ ಇಳೀತಾರೆ ಎಂದು ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿಗೆ ಭಗವಂತ ಬುದ್ಧಿ ಕೊಡಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಆರ್ ಎಸ್ ಎಸ್ ಬಗ್ಗೆ ಹೆಚ್‌ಡಿಡಿ, ಹೆಚ್ಡಿಕೆ ಹೇಳಿಕೆಗಳ ಬಗ್ಗೆ ಗದಗದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, 1925 ರಲ್ಲಿಯೇ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿತ್ತು. ಆಗ ದೇವೆಗೌಡರು ಹುಟ್ಟಿರಲಿಲ್ಲ. ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ. ಬಿಜೆಪಿ ಈ ರೀತಿ ಬಿಂಬಿಸುತ್ತಿದೆ ಅನ್ನೋ ದೇವೇಗೌಡರ ಹೇಳಿಕೆಗೆ, ದೇವೇಗೌಡರ ಮೂಲಕ ಆರ್‌ಎಸ್‌ಎಸ್ ಗೆ ವಿಶೇಷ ಪ್ರಭಾವ ಬೆಳೆಯುವ ಅವಶ್ಯಕತೆ ಇಲ್ಲ. ದೇವೆಗೌಡರು ಹುಟ್ಟುವ ಮುಂಚೆಯೇ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿದೆ ಎಂದು ಟಾಂಗ್ ನೀಡಿದರು.
ಇದೇ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸೂರ್ಯನಿಗೆ ಬೈದರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಕೆಲವರಿರ್ತಾರೆ. ಹಾಗೆಯೇ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಎಲ್ಲಿ? ಆರ್‌ಎಸ್‌ಎಸ್ ಎಲ್ಲಿ? ಕುಮಾರಸ್ವಾಮಿ ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಇಳೀತಾರೆ ಎಂದು ಅಂದುಕೊAಡಿರಲಿಲ್ಲ. ಅವರಿಗೆ ಭಗವಂತ ಬುದ್ಧಿ ಕೊಡಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಕುಟುಕಿದರು.









