K. S. Eshwarappa | ನನ್ನಿಂದ ಪಕ್ಷಕ್ಕೆ ಮುಜುಗರ ಆಯ್ತು ಅನ್ನೋ ನೋವಿದೆ
ಶಿವಮೊಗ್ಗ : ನನ್ನಿಂದ ಪಕ್ಷಕ್ಕೆ ಮುಜುಗರ ಆಯ್ತು ಅನ್ನುವ ನೋವಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ನೆನಪಿಸಿಕೊಂಡರು.
ನನ್ನಿಂದಾಗಿ ಪಕ್ಷಕ್ಕೆ ಮುಜುಗರ ಆಯ್ತಲ್ಲಾ ಎಂಬ ನೋವಿದೆ.
ಆ ಸಂತೋಷ್ ಪಾಟೀಲ್ ಯಾಕೆ ಸಣ್ಣ ವಯಸ್ಸಿನಲ್ಲೆ ಸತ್ತ ಎಂಬ ನೋವು ಇದೆ.
ಸಣ್ಣ ವಯಸ್ಸಿನಲ್ಲೇ ಆ ಹೆಣ್ಣು ಮಗಳು ವಿಧವೆ ಆದಳಲ್ಲಾ ಎಂಬ ನೋವಿದೆ.

ಸಂತೋಷ್ ಪಾಟೀಲ್ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಪ್ರಶ್ನೆ ಮತ್ತು ನೋವಿದೆ ಎಂದು ಹೇಳಿದರು.
ಇನ್ನು ನಾನು ನಂಬಿರುವ ತಾಯಿ ನನಗೆ ನಿನ್ನೆ ಮುಕ್ತನಾಗಿಸಿದ್ದಾಳೆ.
ನಾನು ಈಗ ಕಾರಲ್ಲಿ ಬರುವಾಗ ಕಾಂಗ್ರೆಸ್ ನ ಲೀಡರ್ ಒಬ್ಬರು ಫೋನ್ ಮಾಡಿದ್ದರು.
ಅಣ್ಣಾ ನಿನ್ನ ಮೇಲೆ ಈ ಆರೋಪ ಯಾಕೆ ಬಂತು ಎಂಬುದೇ ಗೊತ್ತಾಗುತ್ತಿಲ್ಲ.
ಏನಾದ್ರೂ ಆಗಲಿ ನಿನಗೆ ಅಭಿನಂದನೆಗಳು ಎಂದು ಹೇಳಿದರು.
ಕಾಂಗ್ರೆಸ್ ನವರಿಗೂ ಸತ್ಯಾಂಶ ಏನು ಎಂಬುದು ತಿಳಿದಿದೆ ಎಂದು ಹೇಳಿದರು.







