ಬಿಜೆಪಿಗೆ ಬಂದವರು ಕಾಂಗ್ರೆಸ್ ಕಡೆ ಮೂಸಿಯೂ ನೋಡಲ್ಲ : ಈಶ್ವರಪ್ಪ
ಮೈಸೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೂ ಕಾಂಗ್ರೆಸ್ ಬರೋದಿಲ್ಲ. ಮುಖ್ಯಮಂತ್ರಿ ಪದವಿ ಅನ್ನೋದು ಕನಸ್ಸು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 17 ಜನರನ್ನ ಯಾವುದೇ ಕಾರಣಕ್ಕೂ ವಾಪಸ್ ಕರೆದುಕೊಳ್ಳೊದಿಲ್ಲ ಅಂತಾ ಸಿದ್ದರಾಮಯ್ಯ ಹೇಳ್ತಾರೆ.
ಅರ್ಜಿ ಹಾಕಿ ಪಕ್ಷಕ್ಕೆ ಬರಲಿ ಅಂತಾ ಡಿಕೆ ಶಿವಕುಮಾರ್ ಹೇಳ್ತಾರೆ. ಮುಳುಗುತ್ತಿರೋ ಹಡಗು ಕಾಂಗ್ರೆಸ್ ಪಕ್ಷ. ಬಂದಿರೋ 17 ಮಂದಿ ಆ ಕಡೆ ಮೂಸಿಯೂ ನೋಡಿಲ್ಲ. ಯಾರಾದರೂ ಮತ್ತೆ ಆ ಪಕ್ಷಕ್ಕೆ ಹೊಗ್ತಾರಾ ಎಂದು ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ ನಲ್ಲಿ ಏಕತೆ ಇಲ್ಲ. ಡಿ.ಕೆ.ಶಿವಕುಮಾರ್ ಅವ್ರ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯ ಅವ್ರ ಫೋಟೋ ಕಿತ್ತು ಬಿಸಾಕಿದ್ದಾರೆ.
ಕಾಂಗ್ರೆಸ್ ನಲ್ಲಿ ಐವರು ಸ್ವಯಂ ಘೋಷಿತ ಮುಖ್ಯಮಂತ್ರಿಗಳಿದ್ದಾರೆ. ಚುನಾವಣೆಗೆ ಇನ್ನು ಒಂದುವರೆ ವರ್ಷವಿದೆ.

ಒಂದೊಂದು ಸಮುದಾಯಕ್ಕೆ ಒಬ್ಬೊಬ್ಬ ನಾಯಕ ಸಿಎಂ ಆಗಬೇಕು ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ. ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲೂ ಅಲ್ಲಗೆಳೆದಿದ್ದರು. ಇದು ಮೋದಿ ಲಸಿಕೆ ಎಂದು ಬಿಂಬಿಸಿದ್ದರು.
ಲಸಿಕೆ ಬೇಡ ಅಂದವರು ಕ್ಯೂ ನಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯ ಸೋಲಿಸಲು ಪರಮೇಶ್ವರ್ ಮುಂದಾಗಿದ್ರು, ಪರಮೇಶ್ವರ್ ಸೋಲಿಸಲು ಸಿದ್ದರಾಮಯ್ಯ ಮುಂದಾಗಿಲ್ಲ ಎಂದು ಇಬ್ಬರು ಪ್ರಮಾಣ ಮಾಡಲಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಸವಾಲ್ ಹಾಕಿದ್ದಾರೆ.









