ಇದು ಕೇವಲ ಸ್ಯಾಂಪಲ್ ಫೈರಿಂಗ್ ಮಾತ್ರ
ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ಇಂದು ಶಿವಮೊಗ್ಗಗೆ ಭೇಟಿ ನೀಡಿ, ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದರು.
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ದುಷ್ಕರ್ಮಿಗಳು ಪ್ರೇಮ್ ಸಿಂಗ್ ಎಂಬುವವರಿಗೆ ಚಾಕು ಇರಿದಿದ್ದರು.
ಅವರಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಪ್ರೇಮ್ ಸಿಂಗ್ ಭೇಟಿ ನಂತರ ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಈ ರೀತಿ ಕೃತ್ಯ ಮಾಡಿದವರಿಗೆ ಕಾಲಿಗೆ ಗುಂಡೇಟು ಹಾಕಿ ಒಳಗೆ ಕೂರಿಸಿದ್ದಾರೆ.
ಇದು ಕೇವಲ ಸ್ಯಾಂಪಲ್ ಪೈರಿಂಗ್ ಮಾತ್ರ, ಮುಂದೆ ಇನ್ನು ಇದೆ ಎಂದು ಎಚ್ಚರಿಕೆ ನೀಡಿದರು.
ಭಾರತಿ ಜನತಾಪಾರ್ಟಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಂತೋಷ್ ಜೀ ರಾಘವೇಂದ್ರ ಜೊತೆ ಬಂದು ಭೇಟಿ ನೀಡಿದ್ದೇನೆ.
ಮುಸ್ಲಿಂ ಗೂಡಾಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಪ್ರೇಮ್ ಸಿಂಗ್ ಚೇತರಿಕೆ ಆಗುತ್ತಿದ್ದಾನೆ. ಆಸ್ತಿ ಮುಟ್ಟುಗೋಲು ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.







