Kalaburagi | ಸಿಡಿಲು ಬಡಿದು 17 ಜಾನುವಾರು ಸಾವು
ಕಲಬುರಗಿ : ಸಿಡಿಲು ಬಡಿದು 17 ಜಾನುವಾರು ಮೃತಪಟ್ಟಿರುವ ಘಟನೆ ಕಾಳಗಿ ತಾಲೂಕಿನ ಲಕ್ಷ್ಮಣನಾಯಕ ತಾಂಡಾದಲ್ಲಿ ನಡೆದಿದೆ.
ಲಕ್ಷ್ಮಣನಾಯಕ ತಾಂಡಾದ ಸುತ್ತಮುತ್ತಲು ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿನ್ನೆ ಕೂಡ ಮಳೆಯಾಗಿದ್ದು, ಹಸುಗಳನ್ನು ಹಜರತ್ ಭಾಷಾ ಖದೀರ್ ದರ್ಗಾ ಗುಡ್ಡದಲ್ಲಿ ಮೇಯಿಸಲು ಹೊಡೆದುಕೊಂಡು ಹೋದಾಗ ಸಿಡಿಲು ಬಡಿದಿದೆ.
ಆಗ 13 ಹಸುಗಳು ಮತ್ತು ನಾಲ್ಕು ಎತ್ತುಗಳು ಮೃತಪಟ್ಟಿವೆ.
ವಿಷಯ ತಿಳಿದು ಘಟನಾಸ್ಥಳಕ್ಕೆ ಶಾಸಕ ಅವಿನಾಶ ಜಾಧವ ಭೇಟಿ ನೀಡಿ ಸರ್ಕಾರಿ ಅನುದಾನದಿಂದ ಜಾನುವಾರು ಕಳೆದುಕೊಂಡವರಿಗೆ ಪರಿಹಾರ ನೀಡಿದ್ದಾರೆ.