Kalaburagi : ಬಳಕೆ ಇಲ್ಲದ ನೀರಿನ ಟ್ಯಾಂಕ್ ಗೆ ಬಿದ್ದು 30 ಕೋತಿಗಳ ದಾರುಣ ಸಾವು…
ಬಳಕೆ ಇಲ್ಲದ ನೀರಿನ ಟ್ಯಾಂಕ್ ಗೆ ಬಿದ್ದು 30 ಕೋತಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಲಬುರಗಿಯ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ಕೋತಿಗಳ ಸಮೂಹಿಕ ಸಾವಿನಿಂದ ಊರಿನ ತುಂಬೆಲ್ಲ ಗಬ್ಬು ವಾಸನೆ ಹರಡಿದ ನಂತರ ಈ ಘಟೆನ ಬೆಳಕಿಗೆ ಬಂದಿದೆ.
ಓವರ್ ಹೆಡ್ ಟ್ಯಾಂಕ್ ಶೀಥಿಲಗೊಂಡು ಶಿಥಿಲಗೊಂಡು ಬೀಳುವ ಹಂತವನ್ನ ತಲುಪಿದ್ದರಿಂದ ಬಳಕೆಯನ್ನ ನಿಲ್ಲಿಸಲಾಗಿತ್ತು. ಕಳೆದ ನಾಲ್ಕಾರು ದಿನಗಳ ಹಿಂದೆ ನಿರು ಕುಡಿಯಲು ಹೋದ ಕೋತಿಗಳು ಟ್ಯಾಂಕ್ ನಿಂದ ಹೊರಬರಲಾಗದೆ ಪ್ರಾಣಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ದುರ್ವಾಸನೆ ಹೆಚ್ಚಾದಂತೆ ಮರದ ಮೇಲೆ ಕೋತಿಗಳ ಪರದಾಟ ಕಂಡ ನಂತರ ಗ್ರಾಮದ ಯುವಕರು ಟ್ಯಾಂಕ್ ಪರಿಶೀಲಿಸಿ ಹಗ್ಗ ಇಳಿ ಬಿಟ್ಟು ಕೆಲವು ಕೋತಿಗಳನ್ನ ರಕ್ಷಿಸಿದ್ದಾರೆ.
Kalaburagi: 30 monkeys died after falling into an unused water tank.