Kamala Harris
ಅಮೆರಿಕ: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬಿಡೆನ್ ಭರ್ಜರಿ ಜಯ ದಾಖಲಿಸಿದ್ದಾರೆ. ಜೊತೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅದ್ರಲ್ಲೂ ಮೊದಲ ಮಹಿಳಾ ಉಪಾಧ್ಯಕ್ಷರು ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಇಂತಹ ಕಮಲಾ ಹ್ಯಾರಿಸ್ ಅವರು ಗೆಲುವಿನ ಬಗ್ಗೆ ಮಾತನಾಡಿದ್ದು, ‘ದುಡಿಯುವ ವರ್ಗಕ್ಕೆ ಅನುಕೂಲವಾಗುವಂತಹ ಆರ್ಥಿಕ ನೀತಿ ರೂಪಿಸುತ್ತೇವೆ. ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಸೇರಿ ಅಮೆರಿಕದ ಇತಿಹಾಸದ ಮುಂದಿನ ಅಧ್ಯಾಯ ಬರೆಯಲು ಸಜ್ಜಾಗುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು ‘ನಾನು ಮತ್ತು ಬಿಡೆನ್ ಅವರು ಜೊತೆಗೂಡಿ ದೇಶದ ಇತಿಹಾಸದ ಹೊಸ ಅಧ್ಯಾಯವನ್ನು ಬರೆಯಲಿದ್ದೇವೆ ಅಧಿಕಾರವಹಿಸಿಕೊಂಡ ಮೊದಲ ದಿನ ಕೋವಿಡ್ 19 ನಿರ್ವಹಣೆ, ಆರ್ಥಿಕ ಚೇತರಿಕೆ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆ ನಿಭಾಯಿಸುವ ಕುರಿತು ನಾವು ಕೆಲಸ ಮಾಡಲಿದ್ದೇವೆ’ ಎಂದು ಟ್ವೀಟ್ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Kamala Harris
‘ಇವಿಎಂ’ನತ್ತ ಬೊಟ್ಟು ಮಾಡುವುದನ್ನ ಬಿಡಿ : ‘ಕೈ’ ನಾಯಕರಿಗೆ ಕಾರ್ತಿ ಚಿದಂಬರಂ ಬುದ್ದಿವಾದ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel