kangana
ಬಾಲಿವುಡ್ ನಟಿ ಕಂಗನಾ ರಣೌತ್ ಆಗಾಗ ಹಲವರ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಾಲಿವುಡ್ ನ ದೊಡ್ಡ ದೊಡ್ಡ ಮಂದಿಯ ವಿರುದ್ಧ ಕಿಡಿಕಾರುತ್ತಲೇ ಸುದ್ದಿಯಲ್ಲಿರೋದು ಹೆಚ್ಚು. ಆದರೆ ಇದೀಗ ಕಂಗನಾ ಬಾಲಿವುಡ್ ನ ಸ್ಟಾರ್ ನಟಿಯನ್ನ ಹೊಗಳಿ ಸುದ್ದಿಯಲ್ಲಿದ್ದಾರೆ. ಹೌದು ಕೆಲವು ದಿನಗಳ ಹಿಂದಷ್ಟೆ ಬಾಲಿವುಡ್ ನ ತನ್ನದೇ ಸಹನಟ ನಟಿಯರ ವಿರುದ್ಧ ಹರಿಹಾಯ್ದು ಸ್ಪಾಟ್ ಲೈಟ್ ನಲ್ಲಿದ್ದ ಕಂಗನಾ ಇದೀಗ ಹೊಗಳಿರೋದು ಯಾರನ್ನ ಗೊತ್ತಾ…! ನೀವೇ ನೋಡಿ..
‘ಲಕ್ಷ್ಮಿ ಬಾಂಬ್’ ಅಲ್ಲ “ಲಕ್ಷ್ಮಿ”ಯಾಗಿ ಬರುತ್ತಿದ್ದಾರೆ ಅಕ್ಷಯ್ ಕುಮಾರ್…! ವಿರೋಧಕ್ಕೆ ಮಣಿದು ಹೆಸರು ಬದಲಾವಣೆ..
ದೀಪಿಕಾ ಪಡುಕೋಣೆ, ಅಮೀರ್ ಖಾನ್, ಕರಣ್ ಜೋಹರ್, ಸಲ್ಮಾನ್ ಖಾನ್, ರಣ್ವೀರ್ ಸಿಂಗ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಮಹೇಶ್ ಭಟ್ ಹೀಗೆ ಹಲವು ನಟರ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದ ಇದೇ ಕಂಗನಾ ಇದೀಗ ಪ್ರಿಯಾಂಕಾ ಚೋಪ್ರಾ ಅನ್ನು ಹೊಗಳಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.
“ಅಧೀರನ” ಹೊಸ ಗೆಟಪ್ ಗೆ ಅಭಿಮಾನಿಗಳು ಫಿದಾ.! ಹೇಗಿದೆ ಹೊಸ ಹೇರಸ್ಟೈಲ್..
ಹೌದು ಸದಾ ದೂರುಗಳನ್ನೇ ಹೇಳುವ ನಟಿ ಕಂಗನಾ ರಣೌತ್, ಅಪರೂಪಕ್ಕೆ ತಮ್ಮ ಸಹ ಸಹನಟಿ ಪ್ರಿಯಾಂಕ ಚೋಪ್ರಾ ಅವರನ್ನ ಹೊಗಳಿರೋದು ನಿಜಕ್ಕೂ ಆಶ್ಚರ್ಯಕರ ಸಂಗತಿಯೇ. ಕಂಗನಾ ತನ್ನ ಸಿನಿಜೀವನದ ಆರಂಭ ದಿನದಲ್ಲಿದ್ದಾಗ ಪ್ರಿಯಾಂಕಾ ಚೋಪ್ರಾ ಜೊತೆಗೆ ಫ್ಯಾಷನ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ನೆನಪುಗಳನ್ನು ಸ್ಮರಿಸಿಕೊಳ್ಳುತ್ತಾ, ಪ್ರಿಯಾಂಕಾ ಚೋಪ್ರಾರನ್ನು ಹೊಗಳಿದ್ದಾರೆ. ಸಿನಿಮಾದ ಸೆಟ್ ನಲ್ಲಿ ಪ್ರಿಯಾಂಕಾ ಒಮ್ಮೆಯೂ ಸಹ ನನ್ನನ್ನು ಹೊಸಬರಂತೆ ಅಥವಾ ಜೂನಿಯರ್ ನಟಿ ಎಂಬಂತೆ ಕಾಣಲಿಲ್ಲ. ಆಕೆ ಸದಾ ನನ್ನನ್ನು ಗೆಳತಿಯಂತೆಯೇ ನೋಡಿದ್ದರು, ನನ್ನೊಂದಿಗೆ ಆಹಾರ ಹಂಚಿಕೊಂಡು ತಿನ್ನುತ್ತಿದ್ದರು, ನನ್ನ ಸಲಹೆಗಳನ್ನು ಸಹ ಕೇಳಿ ಪಡೆಯುತ್ತಿದ್ದರು ಎಂದು ಪ್ರಿಯಾಂಕಾರ ಸನ್ನಡತೆಯ ಗುಣಗಾನ ಮಾಡಿದ್ದಾರೆ. ಇದೇ ವೇಳೆ ‘ಫ್ಯಾಷನ್ ಸಿನಿಮಾ ಮಾಡುವ ಹೊತ್ತಿಗೆ ಪ್ರಿಯಾಂಕಾ ದೊಡ್ಡ ಸ್ಟಾರ್ ಆಗಿದ್ದರು. ನಾನು ಅವರ ಸಿನಿಮಾಗಳನ್ನು ನೋಡಿ ಬೆಳೆದಿದ್ದೆ. ಸೆಟ್ ನಲ್ಲಿ ಸಹ ಅವರನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಆದರೆ ಅವರು ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಿದ್ದರು. ಅವರು ಬಹಳ ಕೂಲ್’ ಎಂದು ಪ್ರಿಯಾಂಕರನ್ನ ಹಾಡಿ ಹೊಗಳಿದ್ದಾರೆ.
kangana
ಕಂಗನಾ ಹಾಗೂ ಸಹೋದರಿ ರಂಗೋಲಿಗೆ ಎದುರಾಯ್ತು ಮತ್ತೊಂದು ಸಂಕಷ್ಟ..!
ದರ್ಶನ್ ರೋಡ್ ಶೋನಲ್ಲಿ ನಟಿ ಅಮೂಲ್ಯ ಭಾಗಿ
ಸುಳ್ಯದ ದೇವರಗುಂಡಿಗೆ ಅಪಮಾನ ಮಾಡಿದ್ರಾ ಸುರಸುಂದರಿಯರು..ಹಸಿಬಿಸಿ ಫೋಟೋಶೂಟ್ಗೆ ಸ್ಥಳೀಯರ ಆಕ್ರೋಶ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel