ಮೋದಿ ಮಹಾನ್ ಸುಳ್ಳ ಎಂದ ಕನ್ಹಯ್ಯ ಕುಮಾರ್..!
ಸಿಪಿಐ ಮುಖಂಡ ಕನ್ಹಯ್ಯಾ ಕುಮಾರ್ , ಪ್ರಧಾನಿ ನರೇಂದ್ರ ಮೋದಿಯವರನ್ನು ಮಹಾನ್ ಸುಳ್ಳ ಎಂದು ಕರೆದಿದ್ದಾರೆ. ಇದೇ ವೇಳೆ ಅಸ್ಸಾಂನ ಬಿಜೆಪಿ ಮುಖಂಡ ಹಿಮಂತ ಬಿಸ್ವ ಶರ್ಮಾರನ್ನು ಮಹಾರಾಷ್ಟ್ರದ ಕಂಸನಿಗೆ ಹೋಲಿಸಿ ಕಿಡಿಕಾರಿದ್ದಾರೆ.
ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ನಾನು ಜೈಲು ಸೇರಿದ್ದೆ ಎಂದು ಬಾಂಗ್ಲಾದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಆದ್ರೆ ಈ ಹೇಳಿಕೆ ನೀಡಿದ ಬೆನ್ನಲ್ಲೇ ಮೋದಿ ಅವರನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿದೆ. ಇದೇ ವಿಚಾರವಾಗಿ ಕನ್ಹಯ್ಯ ಮಾತನಾಡಿದ್ದು, ಮೋದಿ ಹೇಳಿರೋದು ಶುದ್ಧ ಸುಳ್ಳು ಎಂದಿದ್ದಾರೆ.
ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶದ ಸಂಪತ್ತು ಮಾರಾಟ ಮಾಡುವವರನ್ನು ಬೆಂಬಲಿಸಬೇಡಿ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಕನ್ಹಯ್ಯ ಗುಡುಗಿದ್ದಾರೆ. ಬಾಂಗ್ಲಾ ವಿಮೋಚನಾ ಚಳವಳಿಯನ್ನು ಭಾರತ ಬೆಂಬಲಿಸಿತ್ತು ಹಾಗೂ ಪಾಕಿಸ್ತಾನ ವಿರೋಧಿಸಿತ್ತು. ಆದ್ದರಿಂದ ಮೋದಿ ಎಲ್ಲಿ ಸತ್ಯಾಗ್ರಹ ಮಾಡಿದರು, ಅವರನ್ನು ಪಾಕಿಸ್ತಾನ ಸರಕಾರ ಜೈಲಿಗೆ ಕಳುಹಿಸಿತ್ತೇ ಅಥವಾ ಭಾರತ ಸರಕಾರವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಶುದ್ಧ ಸುಳ್ಳು ಎಂದು ಕನ್ಹಯ್ಯ ಕಿಡಿಕಾರಿದ್ದಾರೆ.