ಮೋದಿ ವೀಸಾ ರದ್ದಾಗಬೇಕೆಂದ ದೀದಿ..!
ಪಶ್ಚಿಮಬಂಗಾಳ : ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾ ದೇಶಕ್ಕೆ 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಆದ್ರೆ ಇದಕ್ಕೆ ಆ ದೇಶದಲ್ಲೂ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆದು ಹಿಂಸಾತ್ಮಕ ರೂಪವೂ ಪಡೆದಿದೆ.
ನಮ್ಮ ದೇಶದಲ್ಲೂ ಹಲವಾರು ನಾಯಕರು ಖಂಡಿಸಿದ್ದಾರೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈ ಬಗ್ಗೆ ಗುಡುಗಿದ್ದು, ಪ್ರಧಾನಿಯ ವೀಸಾ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೌದು ನಮ್ಮ ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ. ಈ ಸಮಯದಲ್ಲಿ ನಮ್ಮ ಪ್ರಧಾನಿಯವರು ಬಾಂಗ್ಲಾದೇಶಕ್ಕೆ ತೆರಳುತ್ತಾರೆ. ಅಲ್ಲಿ ನಮ್ಮ ಪಶ್ಚಿಮ ಬಂಗಾಳದ ಬಗ್ಗೆಯೇ ಮಾತನಾಡುತ್ತಾರೆ. ಈ ಹಿಂದೆ 2019ರ ಲೋಕಸಭಾ ಚುನಾವಣೆ ವೇಳೆ ನಾವು ಬಾಂಗ್ಲಾದೇಶದ ಒಬ್ಬ ನಟರನ್ನು ಪ್ರಚಾರಕ್ಕೆ ಕರೆಸಿದ್ದೆವು. ಆದರೆ ಬಾಂಗ್ಲಾದೇಶ ಸರ್ಕಾರವು ಅವರ ವೀಸಾವನ್ನೇ ರದ್ದು ಮಾಡಿತ್ತು. ಈಗ ನಮ್ಮಲ್ಲಿ ಚುನಾವಣೆ ಇರುವಾಗ ಪ್ರಧಾನಿ ಅಲ್ಲಿಗೆ ಹೋಗಿದ್ದಾರೆ ಮತ್ತು ಒಂದು ಬಗೆಯ ಮತದಾರರ ಮತವನ್ನು ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರ ವೀಸಾ ಏಕೆ ರದ್ದಾಗಿಲ್ಲ. ನಾವು ಈ ಕುರಿತಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿಯವರು ಮಾಟುವಾ ಸಮುದಾಯದ ಆಧ್ಯಾತ್ಮಿಕ ಗುರು ಹರಿಚಂದ್ ಠಾಕೂರ್ ಅವರ ಜನ್ಮಸ್ಥಳವಾದ ಒರಕಂಡಿಯ ದೇವಸ್ಥಾನವೊಂದಕ್ಕೆ ಭೇಟಿ ನೀಡಿರುವ ಬಗ್ಗೆಯೂ ಮಾತನಾಡಿರೋ ದೀದಿ ಒರಕಂಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಹಿಂದೂಗಳೇ ಹೆಚ್ಚಿದ್ದಾರೆ. ಅದೇ ಕಾರಣಕ್ಕೆ ಪ್ರಧಾನಿ ಅಲ್ಲಿ ಭೇಟಿ ನೀಡಿ ಮತ ಪಡೆಯುವ ಪ್ರಯತ್ನ ಮಾಡಿದ್ದಾರೆ. ಬಾಂಗ್ಲಾದೇಶದವರನ್ನು ಮಮತಾ ಒಳನುಸುಳಿಸಿಕೊಂಡಿದ್ದಾರೆ ಎಂದು ದೂರುತ್ತಾರೆ. ಈಗ ಅವರೇ ಈ ರೀತಿ ಬಾಂಗ್ಲಾಕ್ಕೆ ತೆರಳಿ ಅಲ್ಲಿ ಮತ ಪಡೆಯಲು ಯತ್ನಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
REAL ME ಹೊಸ ಸ್ಮಾರ್ಟ್ ಫೋನ್ ರಿಲೀಸ್ ಆಗೋದು ಯಾವಾಗ ಗೊತ್ತಾ..?