Kantara : ಭೂತಕೋಲ ಹಿಂದೂ ಸಂಸ್ಕೃತಿಯಲ್ಲ – ಚೇತನ್ ಅಹಿಂಸಾ..
ಕಥೆ ಮತ್ತು ಚಿತ್ರಕಥೆ ಉತ್ತಮವಾಗಿದ್ದಾರೆ ಗಡಿ ದಾಟಿಯೂ ದಾಖಲೆ ಬರೆಯಬಹುದು ಎನ್ನುವುದಕ್ಕೆ ಕಾಂತಾರ ಉದಾಹರಣೆ, ಸ್ಯಾಂಡಲ್ ವುಡ್ ನಿಂದ ಶುರುವಾದ ಈ ಅಲೆ ಇದೀಗ ಭಾರತದಾದ್ಯಂತ ಆವರಿಸಿದೆ.
ಕರಾವಳಿ ಸಂಸ್ಕೃತಿ ಕಥಾ ಹಂದರಕ್ಕೆ ಜನ ಥ್ರಿಲ್ ಆಗಿದ್ದಾರೆ. ಸಿನಿಮಾ ಅದ್ಭುತ ಎಂದು ಹೇಳುತ್ತಿರುವವರ ನಡುವೆ ಬೆರಳೆಣಿಕೆ ಮಂದಿ ಚಿತ್ರದಲ್ಲಿ ನೆಗೆಟಿವ್ ಹುಡುಕುವ ಪ್ರಯತ್ನದಲ್ಲಿದ್ದಾರೆ.
ಅಂದ್ಹಾಗೆ ಯಾವುದೇ ವಿಚಾರದಲ್ಲೂ ವಿವಾದಾತ್ಮಕವಾಗಿಯೇ ಮಾತನಾಡುವ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಇದೀಗ ಕಾಂತಾರ ಬಗ್ಗೆ ಮಾತನಾಡಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ,
ಕಾಂತಾರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ ಆದ್ರೆ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ ಬಹುಜನ ಸಂಪ್ರದಾಯಗಳು, ವೈದಿಕ, ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಚೇತನ್ ಅಹಿಂಸಾ ಪೋಸ್ಟ್ ಗೆ ಸೋಶೀಯಲ್ ಮೀಡಿಯಾದಲ್ಲಿ ವಿರೋಧ ವಕ್ತವಾಗಿದೆ. Kantara : Bhutakola is not Hindu culture – Chetan Ahimsa..