Kantara : ವರಾಹ ರೂಪಂ ಹಾಡು ಬಳಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ..!!!
ದೇಶಾದ್ಯಂತ ಸಂಚಲನ ಸೃಷ್ಟಿಸಿ ಎಲ್ಲಾ ಭಾಷೆಗಳ ಅಭಿಮಾನಿಗಳಿಂದಲೂ ಮೆಚ್ಚುಗೆ ಗಳಿಸುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿ ನಟಿಸಿರುವ ಕಾಂತಾರ (Kantara) ಸಿನಿಮಾಗೆ ಇದೀಗ ಸಂಕಷ್ಟ ಎದುರಾಗಿದೆ. (HombaleFilms) ಹೊಂಬಾಳೆ ಫಿಲಮ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಕೊನೆಯಲ್ಲಿ ಬರುವ ವರಾಹ ರೂಪಂ ಹಾಡು ಸೂಪರ್ ಹಿಟ್ ಆಗಿತ್ತು.
ಆದ್ರೀಗ ಇದೇ ಹಾಡಿಗೆ ಕೇರಳದ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.. (Varaha Rupam) ವರಾಹ ರೂಪಂ ಹಾಡನ್ನು ಸಿನಿಮಾದಲ್ಲಿ ಬಳಸದಂತೆ ತಡೆಯಾಜ್ಞೆ ನೀಡಲಾಗಿದೆ.. ಈ ಹಾಡನ್ನು ನಾನು ಯಾವುದರಿಂದಲೂ ಕದ್ದಿಲ್ಲ ಎಂದು ಈಗಾಗಲೇ ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ ಆದ್ರೂ ,ಕೇರಳದ ಕೊಯಿಕ್ಕೋಡು ಕೋರ್ಟ್ ಈ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಿದೆ.
ಕೇರಳದ ತೈಕುಡಂ ಬಿಡ್ಜ್ ಬ್ಯಾಂಡ್ ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ತಮ್ಮ ಬ್ಯಾಂಡ್ ನ ಹಾಡಿನಿಂದ ಕದಿಯಲಾಗಿದೆ ಎಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು. ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿಯೂ ತಿಳಿಸಿತ್ತು. ಅಂತೆಯೇ ತಂಡವು ಕೊಯಿಕ್ಕೋಡು ಕೋರ್ಟ್ ಗೆ ಮೊರೆ ಹೋಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೈಕ್ಕುಡಂ ಬ್ರಿಡ್ಜ್ ನ ಅನುಮತಿ ಇಲ್ಲದೇ ಈ ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ. ಈ ಕುರಿತು ಸ್ವತಃ ತೈಕುಡಂ ಬ್ರಿಡ್ಜ್ ಬ್ಯಾಂಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
Kantara : Injunction from court not to use Varaha Rupam song..!!!








