Karnataka Budget 2021 Live : ಮನೆ ಬಾಗಿಲಿಗೆ ಮಾಶಾಸನ

1 min read
agriculture

Karnataka Budget 2021 Live : ಮನೆ ಬಾಗಿಲಿಗೆ ಮಾಶಾಸನ

ಬೆಂಗಳೂರು : ರಾಜ್ಯ ಬಜೆಟ್ ನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಬಾಗಿಲಿಗೆ ಮಾಶಾಸನ ಅಭಿಯಾನ ಆರಂಭಿಸುವುದಾಗಿ ತಿಳಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರು 2021 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಮನೆ ಬಾಗಿಲಿಗೆ ಮಾಶಾಸನ ಅಭಿಯಾನ ಸ್ವಾಮಿತ್ವ ಯೋಜನೆಗೆ 25 ಕೋಟಿ ರೂ ಅನುದಾನ ಘೋಷಣೆ ಮಾಡಿದ್ದಾರೆ.

ವಿಜಯನಗರ ಜಿಲ್ಲೆಗೆ ವಿಶೇಷ ಅನುದಾನ, ಮನೆ ಬಾಗಿಲಿಗೆ ಮಾಶಾಸನ ಅಭಿಯಾನ ಆರಂಭ ಮಾಡಲಾಗುವುದು. ಕೈಗಾರಿಕಾ ಕಾರಿಡಾರ್ ಗಳ ಅಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕ ತೆರಿಗೆ ಸ್ಲ್ಯಾಬ್ ನೀತಿ, ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.

Karnataka Budget

ಇದಲ್ಲದೆ ಪರಿಶಿಷ್ಟ ಪಂಗಡದ ಆಶ್ರಮದ ಶಾಲೆಗಳಿಗೆ ವಾಲ್ಮೀಕಿ ಶಾಲೆಗಳೆಂದು ಮರು ನಾಮಕರಣ ಮಾಡೋದಾಗಿ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರಗಳಲ್ಲಿ ಮೆಟ್ರಿಕ್ ನಂತರದ 50 ಹಾಸ್ಟೆಲ್ಸ್ ಸ್ಥಾಪನೆ ಮಾಡಲು 50 ಕೋಟಿ ರೂಪಾಯಿ ಅನುದಾನ ಘೋಷಣೆ, ಈ ಯೋಜನೆಯಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ರಾಜ್ಯದ 4 ವಿಭಾಗಗಳಲ್ಲಿ ಮುರಾರ್ಜಿ ವಸತಿ ಶಾಲೆ ಆರಂಭ. ಎಸ್?ಸಿ/ಎಸ್?ಟಿ ಉದ್ಯಮಿಗಳ ಸಹಾಯ ಧನ ಯೋಜನೆ ವಿಸ್ತರಣೆ ಮಾಡಲಾಗುವುದು. ಹೋಟೆಲ್, ಮಳಿಗೆ, ಫ್ರಾಂಚೈಸಿ ಸ್ಥಾಪಿಸಲು ಶೆಡ್ಯೂಲ್ ಬ್ಯಾಂಕ್?ಗಳಿಂದ 1 ಕೋಟಿ ರೂ. ಸಾಲ ಪಡೆಯಲು ಅವಕಾಶ ನೀಡಲಾಗುವುದು. ಹಾಸನದಲ್ಲಿ ಬಿ.ಆರ್ ಅಂಬೇಡ್ಕರ್ ಸ್ಮಾರಕ ಭವನ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd