‘ರಾಜಾಹುಲಿ’ ಬಜೆಟ್ ನಿರಾಶಾದಾಯಕ : ಎಸ್ ಆರ್ ಪಾಟೀಲ್
1 min read
‘ರಾಜಾಹುಲಿ’ ಬಜೆಟ್ ನಿರಾಶಾದಾಯಕ : ಎಸ್ ಆರ್ ಪಾಟೀಲ್
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಈ ಬಾರಿಯ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಬಹುತೇಕ ಎಲ್ಲಾ ಪ್ರತಿಪಕ್ಷ ನಾಯಕರು ಬಜೆಟ್ ವಿರುದ್ಧ ತೀವ್ರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ರಾಜಾಹುಲಿ ಬಜೆಟ್ ಮಂಡನೆ ಮಾಡಲು ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ್ದರು. ಇದೀಗ ಬಜೆಟ್ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಎಸ್.ಆರ್. ಪಾಟೀಲ್ ಪ್ರತಿಕ್ರಿಯಿಸಿ, ಸಿಎಂ ಮಂಡಿರುವ ಬಜೆಟ್‌ನಲ್ಲಿ ಯಾವುದೇ ಯೋಜನೆ, ಘೋಷಣೆ ಕಂಡು ಬಂದಿಲ್ಲ. ಬಕಾಸುರನ ಹೊಟ್ಟೆಗೆ ಹಿಡಿ ಅನ್ನ ಹಾಕಿದಂತಾಗಿದೆ ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ, ಇದು ನಿರಾಶಾದಾಯಕ ಬಜೆಟ್ ಎಂದಿದ್ದಾರೆ.
‘ರಾಜಾಹುಲಿ’ ಬಜೆಟ್ ಆರ್ಥಿಕ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದ ‘ಹುಲಿಯಾ’..!
ಇದೇ ವೇಳೆ ಎತ್ತಿನಹೊಳೆ ಯೋಜನೆಗೆ ಹಣ ಮೀಸಲಿಟ್ಟಿಲ್ಲ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಟ್ಟಿಲ್ಲ. 31ನೇ ಜಿಲ್ಲೆಯಾದ ವಿಜಯನಗರಕ್ಕೆ ಒಂದು ರೂಪಾಯಿ ಹಣ ಮೀಸಲಿಟ್ಟಿಲ್ಲ, ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿದ್ದು, ಇದು ಕೇವಲ ಭಾಷಣದ ಬಜೆಟ್ ಆಗಿದೆ ಎಂದರು.
ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತಿವಿ ಅಂತ ಹೇಳಿರೋದನ್ನೇ ಬಜೆಟ್ನಲ್ಲಿ ಸಿಎಂ ಹೇಳಿದ್ದಾರೆ, ಆದ್ರೆ ಹಣವನ್ನೇ ನೀಡಿಲ್ಲ ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ಪೂರಕವಾಗಿಲ್ಲ, ಇದೊಂದು ಜನ ವಿರೋಧಿ ಸರ್ಕಾರ, ಜನ ವಿರೋಧಿ ಬಜೆಟ್, ಸಮಾಜದ ಎಲ್ಲಾ ವರ್ಗದವರಿಗೂ ಇದು ನಿರಾಶದಾಯಕ ಬಜೆಟ್ ಅಲ್ಲದೇ ಎಂದು ಆಕ್ರೋಶ ಹೊರಹಾಕಿದ್ರು.