karnataka congress | 40ಪರ್ಸೆಂಟ್ ಸರ್ಕಾರ ದಲ್ಲಿ ಲಂಚವೇ ಸರ್ವಸ್ವ, ಲಂಚವೇ ಸರ್ವವ್ಯಾಪಿ
ಬೆಂಗಳೂರು : 40ಪರ್ಸೆಂಟ್ ಸರ್ಕಾರ ದಲ್ಲಿ ಲಂಚವೇ ಸತ್ಯ, ಲಂಚಕ್ಕೇ ಪ್ರಾಶಸ್ತ್ಯ, ಲಂಚವೇ ದೇವರು, ಲಂಚವೇ ಸರ್ವಸ್ವ, ಲಂಚವೇ ಸರ್ವವ್ಯಾಪಿ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಪಿಎಸ್ ಐ ಅಕ್ರಮದ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಉದ್ಯೋಗಾಕಾಂಕ್ಷಿಗಳ ಬಳಿ ಪುಸ್ತಕ, ಪೆನ್ನು, ಭವಿಷ್ಯದ ಕನಸು ಬಿಟ್ಟರೆ ಬೇರೇನೂ ಇಲ್ಲ. ಸರ್ಕಾರಕ್ಕೆ ಲಂಚದ ಆಸೆ, ಕಮಿಷನ್ ಲಾಲಸೆ ಬಿಟ್ಟರೆ ಬೇರೇನೂ ಇಲ್ಲ. 40 ಪರ್ಸೆಂಟ್ ಸರ್ಕಾರ ನಡೆಸಿದ PSI ಅಕ್ರಮದಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ, ಬದುಕು ಛಿದ್ರವಾಗಿದೆ.ಇವರ ಆತಂತ್ರದ ಬದುಕಿಗೆ ಪರಿಹಾರವೇನು ಬಸವರಾಜ ಬೊಮ್ಮಾಯಿ ಅವರೇ?
40ಪರ್ಸೆಂಟ್ ಸರ್ಕಾರ ದಲ್ಲಿ ಲಂಚವೇ ಸತ್ಯ, ಲಂಚಕ್ಕೇ ಪ್ರಾಶಸ್ತ್ಯ, ಲಂಚವೇ ದೇವರು, ಲಂಚವೇ ಸರ್ವಸ್ವ, ಲಂಚವೇ ಸರ್ವವ್ಯಾಪಿ, ನಿದ್ದೆ, ಊಟ ಬಿಟ್ಟು, ಸರ್ಕಾರಿ ನೌಕರಿಗಾಗಿ ಭವಿಷ್ಯ ಪಣಕ್ಕಿಟ್ಟು ಓದಿ ಪರೀಕ್ಷೆ ಬರೆದು ಉದ್ಯೋಗಾಕಾಂಕ್ಷಿಗಳು ಕಾಯ್ತಾ ಇದಾರೆ, ಲಂಚ ಪಡೆದಾದ್ರೂ ಕೆಲಸ ಕೊಡಿ ಎನ್ನುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ. ಕೇಳಿಸಿಕೊಳ್ಳಿ.
ಈ ಯುವಕರು ತಮ್ಮ ಕುಟುಂಬಸ್ಥರಿಗೆ ನೌಕರಿ ಪಡೆಯುವ ಭರವಸೆ ಕೊಟ್ಟು ಓದಿದ್ದಾರೆ, ಪೋಷಕರು ತಮ್ಮ ಮಗ ಉದ್ಯೋಗಸ್ಥನಾಗಿ ಮನೆಗೆ ಬೆಳಕಾಗುತ್ತಾನೆ ಎಂದು ಆಸೆ ಕಂಗಳಲ್ಲಿ ನೋಡ್ತಿದಾರೆ. ಭ್ರಷ್ಟ 40ಪರ್ಸೆಂಟ್ ಸರ್ಕಾರ ಸರ್ಕಾರದಿಂದ ಈ ಯುವಕರು ಮನೆಯಲ್ಲಿ ಮುಖ ತೋರಿಸಲಾಗದ ಸ್ಥಿತಿಯಲ್ಲಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ತಾವು ಇವರ ಗೋಳು ಕೇಳುವುದು ಯಾವಾಗ ಎಂದು ಪ್ರಶ್ನಿಸಿದೆ.
ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಉದ್ಯೋಗಾಕಾಂಕ್ಷಿಗಳು ನೋಟಿಫಿಕೇಶನ್‌ಗಾಗಿ ಕಾಯುತ್ತಿದ್ದಾರೆ. ಮಂಜೂರಾದ ಕೆಲವೇ ಹುದ್ದೆಗಳು ಮಾರಾಟವಾಗುತ್ತಿವೆ. ಪೆನ್, ಪುಸ್ತಕಗಳೇ ಅಭ್ಯರ್ಥಿಗಳ ಆಸ್ತಿ.ಲಂಚವಿಲ್ಲದೆ ಕೆಲಸ ಮಾಡದ 40ಪರ್ಸೆಂಟ್ ಸರ್ಕಾರ ಕ್ಕೆ ಅವುಗಳೇ ಲಂಚವಾಗಿ ನೀಡುತ್ತಿದ್ದಾರೆ. ಈ ಲಂಚ ಪಡೆದಾದರೂ ಕೆಲಸ ಕೊಡಿ ಬಸವರಾಜ ಬೊಮ್ಮಾಯಿ ಅವರೇ!
https://twitter.com/INCKarnataka/status/1572141010599157761?s=20&t=C9cUrxftuop1Mj-UsDVXkQ
ವೇದಿಕೆ ಹುಲಿ ಬಸವರಾಜ ಬೊಮ್ಮಾಯಿ ಅವರೇ, ಬನ್ನಿ KPSC ಅಭ್ಯರ್ಥಿಗಳ ಎದುರು ನಿಂತು ನಿಮ್ಮ ದಮ್ಮು ತಾಕತ್ತು ತೋರಿಸಿ. ಬಿಜೆಪಿಯ ‘ಡಾನ್ಸಿಂಗ್ ಸ್ಟಾರ್ಸ್’ ಸಚಿವರೇ, ಬನ್ನಿ ಪ್ರತಿಭಟನಾ ನಿರತ ಅಭ್ಯರ್ಥಿಗಳ ಎದುರು ನಿಮ್ಮ ನೃತ್ಯ ಕೌಶಲ್ಯ ತೋರಿಸಿ. ಜನಸ್ಪಂದನೆ ಎಂಬ ಜಾತ್ರೆ ಮಾಡಿದ 40ಪರ್ಸೆಂಟ್ ಸರ್ಕಾರ ಈ ಯುವ ಸಮುದಾಯಕ್ಕೆ ಸ್ಪಂದನೆ ಮಾಡ್ತಿಲ್ಲ ಏಕೆ?
ಲಂಚ ಪಡೆದು PSI ಪರಿಕ್ಷಾರ್ಥಿಗಳಿಗೆ ಬ್ಲೂಟೂತ್ ನೀಡಿದ 40ಪರ್ಸೆಂಟ್ ಸರ್ಕಾರ ಕ್ಕೆ ಲಂಚ ಕೊಡಲಾಗದ ಅಭ್ಯರ್ಥಿಗಳು ಬ್ಲೂಟೂತ್ ಅನ್ನೇ ಲಂಚವಾಗಿ ಕೊಡ್ತಿದಾರೆ. ಪವರ್ ಲೆಸ್ ಸಿಎಂಗೆ ಅಭ್ಯರ್ಥಿಗಳು ಪವರ್ ಬ್ಯಾಂಕ್ ನೀಡಲು ತಯಾರಿದ್ದಾರೆ, ಅದನ್ನು ಪಡೆದಾದರೂ ಉದ್ಯೋಗ ನೀಡುವ ಪವರ್ ತೋರಿಸುವಿರಾ ಬಸವರಾಜ ಬೊಮ್ಮಾಯಿ ಅವರೇ? ನಿಮ್ಮ ‘ಜನಸ್ಪಂದನೆ’ ತೋರುವಿರಾ?
40ಪರ್ಸೆಂಟ್ ಸರ್ಕಾರ ಕ್ಕೆ ಲಂಚ ಕೊಡಲು ರೊಕ್ಕವಿಲ್ಲ ನಮ್ಮ ಪಾಲಿನ ರೊಟ್ಟಿಯಾದರೂ ಕೊಡುತ್ತೇವೆ ಕೆಲಸ ಕೊಡಿ ಎಂಬುದು ಅಭ್ಯರ್ಥಿಗಳ ವೇದನೆ, ನಿವೇದನೆ ಎಲ್ಲವೂ. ಬಸವರಾಜ ಬೊಮ್ಮಾಯಿ ಅವರೇ, ಈ ರೊಟ್ಟಿಯ ಲಂಚದಲ್ಲಿ ಯುವಕರ ಬದುಕಿನ ಕನಸಿದೆ, ಭವಿಷ್ಯದ ಆತಂಕವಿದೆ, ಶ್ರಮವಿದೆ, ಪ್ರಾಮಾಣಿಕತೆಯಿದೆ. ಇದನ್ನು ಪಡೆದಾದರೂ ಉದ್ಯೋಗ ನೀಡಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.








