“ಆಕಾಶದ ಗುಡ್ಡಕ್ಕೆ ಶಿಶು ಏರಿತಲೇ ಪರಾಕ್” ಮಾಲತೇಶ ದೇವರ ಕಾರ್ಣಿಕ….
ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಎನ್ನುತ್ತಾ ಗೊರವಪ್ಪ ನಾಗಪ್ಪ ಉರ್ಮಿ ಅವರು ಕಾರ್ಣಿಕ ನುಡಿದಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಗೊರವಪ್ಪ ನಾಗಪ್ಪ ಉರ್ಮಿ ಅವರು 20 ಅಡಿಯ ಬಿಲ್ಲನ್ನೇರಿ ಕಾರಣಿಕ ನುಡಿದಿದ್ದಾರೆ.
ದಸರಾ ಹಬ್ಬದ ಸಮಯದಲ್ಲಿ ನಡೆಯೋ ಮಾಲತೇಶ ದೇವರ ಕಾರ್ಣಿಕೋತ್ಸವ, ವರ್ಷದ ಭವಿಷ್ಯವಾಣಿ ಅಂತಲೆ ನಂಬಲಾಗುತ್ತದೆ. ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಎಂದು ಬಂದಿರುವ ಕಾರ್ಣೀಕದ ಭವಿಷ್ಯವವನ್ನ ಹಲವು ರೀತಿಯಲ್ಲಿ ಅಂದಾಜಿಸಲಾಗುತ್ತಿದೆ.
ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್ ಇದರ ವಿಶ್ಲೇಷಣೆ ಮಾಡಿದ್ದು, ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಅಂತಾ ಕಾರ್ಣಿಕ ವಿಶ್ಲೇಷಿಸಿದ್ದಾರೆ.
Karnika: Ranebennuru Malatesha Devasthan Karnika prediction