ಮದ್ಯವ್ಯಸನಿಗಳಿಗೆ ಹೆಣ್ಣು ಕೊಟ್ಟು ಮದುವೆ ಮಾಡಬೇಡಿ ಎಂದ ಕೇಂದ್ರ ಸಚಿವರು…
ತಮ್ಮ ಮನೆಯ ಹೆಣ್ಣು ಮಕ್ಕಳನ್ನ ಮತ್ತು ಸಹೋದರಿಯರನ್ನ ಕುಡುಕರಿಗೆ ಕೊಟ್ಟು ಮದುವೆ ಮಾಡಬೇಡಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಮನವಿ ಮಾಡಿದ್ದಾರೆ. ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಅಥವಾ ಕಾರ್ಮಿಕರು ಉತ್ತಮ ವರ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನ್ ಪುರದ ಲಂಬುವಾ ವಿಧಾನಸಭಾ ಕ್ಷೇತ್ರದಲ್ಲಿ ಡಿ-ಅಡಿಕ್ಷನ್ ಕುರಿತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಿಶೋರ್, “ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ” ಎಂದು ಹೇಳಿದರು. ನಾನು ಸಂಸದನಾಗಿ, ನನ್ನ ಪತ್ನಿ ಶಾಸಕಿಯಾಗಿ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗದಿದ್ದಾಗ ಜನಸಾಮಾನ್ಯರಿಗೆ ಹೇಗೆ ಸಾಧ್ಯ ಎಂದಿದ್ದಾರೆ.
ತನ್ನ ಕುಟುಂಬಕ್ಕೆ ಸಂಭವಿಸಿದ ದುರಂತವನ್ನು ನೆನಪಿಸಿಕೊಂಡ ಕಿಶೋರ್, “ನನ್ನ ಮಗ (ಆಕಾಶ್ ಕಿಶೋರ್) ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸುವ ಅಭ್ಯಾಸ ಹೊಂದಿದ್ದ. ಅವನನ್ನ ಡಿ ಅಡಿಕ್ಷನ್ ಸೆಂಟರ್ ಗೆ ಸೇರಿಸಲಾಯಿತು. ಅವನು ಕುಡಿತದ ಚಟದಿಂದ ಹೊರಬರುತ್ತಾನೆ ಎಂದು ಭಾವಿಸಿ 6 ತಿಂಗಳ ಮದುವೆ ಮಾಡಿದವು. ಆದರೆ, ಅವನು ಮದುವೆಯಾದ ನಂತರ ಮತ್ತೆ ಕುಡಿಯಲು ಪ್ರಾರಂಭಿಸಿ ಇದು ಅಂತಿಮವಾಗಿ ಅವನ ಸಾವಿಗೆ ಕಾರಣವಾಗಿತ್ತು. ಎರಡು ವರ್ಷಗಳ ಹಿಂದೆ, ಅಕ್ಟೋಬರ್ 19 ರಂದು, ಆಕಾಶ್ ನಿಧನರಾದಾಗ, ಅವನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು” ಎಂದು ಕೇಂದ್ರ ಸಚಿವರು ಹೇಳಿದರು.
ಇದರಿಂದ ತನ್ನ ಸೊಸೆ ವಿಧವೆಯಾದಳು ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಕೌಶಲ್ ಕಿಶೋರ್, ಇನ್ನು ಮುಂದೆ ಜನರು ತಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಇದರಿಂದ ರಕ್ಷಿಸುವಂತೆ ಮನವಿ ಮಾಡಿದರು.
“ಸ್ವಾತಂತ್ರ್ಯ ಚಳವಳಿಯಲ್ಲಿ, 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು, ಆದರೆ ವ್ಯಸನದಿಂದಾಗಿ ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಸಾಯುತ್ತಾರೆ” ಎಂದು ಸಚಿವರು ಗಮನಿಸಿ ಹೇಳಿದ್ದಾರೆ. ಸುಮಾರು 80 ಪ್ರತಿಶತದಷ್ಟು ಕ್ಯಾನ್ಸರ್ ಸಾವುಗಳು ತಂಬಾಕು, ಸಿಗರೇಟ್ ಮತ್ತು ‘ಬೀಡಿ’ ಚಟದಿಂದ ಉಂಟಾಗುತ್ತವೆ ಎಂದು ಹೇಳಿದರು.
Kaushal Kishore Union minister urges people to not marry off daughters to alcoholics








