ಸೋನು ಸೂದ್ ಕಟೌಟ್ ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ – ಮೂರ್ಖತನ ಎಂದು ಕೆಂಡಕಾರಿದ ನಟಿ
ಸದಾ ನೆಗೆಟಿವ್ ರೋಲ್ಸ್ ಗಳಲ್ಲೇ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ರೀಲ್ ಲೈಫ್ ನ ವಿಲ್ಲನ್ ಸೋನು ಸೂದ್ ಆಫ್ ಸ್ಕ್ರೀನ್ ನ ರಿಯಲ್ ಹೀರೋ ಅನ್ನೋದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಕಳೆದ ಲಾಕ್ ಡೌನ್ ನಿಂದ ಇಲ್ಲಿಯವರೆಗೂ ಬಡವರು , ಶ್ರೀಮಂತರು ಅಂತ ನೋಡದೇ ಅಗತ್ಯವಿದ್ದರಿಗೆ ಸಹಾಯ ಮಾಡುತ್ತಲೇ ಇರುವ ಸೋನು ಬಡವರ ಪಾಲಿನ ದೇವರಾಗಿದ್ದಾರೆ..
ಅಭಿಮಾನಿಗಳ ಮನಸ್ಸಿನಲ್ಲಿ ವಿರಾಜಮಾನರಾಗಿರುವ ಸೋನು ಸೂದ್ ಅವರ ಮೇಲಿನ ಅಭಿಮಾನವನ್ನ ಒಬ್ಬಬ್ಬರು ಒಂದೊಂದು ರೀತಿ ತೋರ್ಪಡಿಸಿಕೊಳ್ತಿದ್ದಾರೆ. ಕೆಲವರು ಅಂಗಡಿಗೆ ಸೋನು ಸೂದ್ ಹೆಸರಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಸೋನು ಸೂದ್‌ಗಾಗಿ ಗುಡಿಯನ್ನೇ ನಿರ್ಮಾಣ ಮಾಡಲಾಗಿದೆ. ಇನ್ನೂ ಹಲವರು ಮಕ್ಕಳಿಗೆ ಸೋನು ಸೂದ್ ಹೆಸರಿಟ್ಟಿದ್ದಾರೆ.
ಅದೇ ರೀತಿ ಇತ್ತೀಚೆಗೆ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ ಸೋನು ಸೂದ್‌ರ ದೊಡ್ಡ ಫ್ಲೆಕ್ಸ್‌ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಸೋನು ಸೂದ್ ಸಹ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನಿಮ್ಮ ಪ್ರೀತಿಗೆ ಸದಾ ಖುಣಿಯಾಗಿರುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಆದ್ರೆ ಈ ವಿಡಿಯೋ ನೋಡಿ ನಟಿಯೊಬ್ಬರು ಕೆಂಡ ಕಾರಿದ್ದು, ಇದು ಮೂರ್ಖತನ ಎಂದು ಆಕ್ರೋಶ ಹೊರಹಾಕಿದ್ದಾರೆ. ಹೌದು.. ಕೆಲ ಹಿಂದಿ ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ನಟಿಸಿರುವ ನಟಿ ಕವಿತಾ ಕೌಶಿಕ್ ಸೋನು ಸೂದ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿರುವುದನ್ನು ಖಂಡಿಸಿದ್ದಾರೆ. ‘ಜನರು ಹಸಿವಿನಿಂದ ನರಳುತ್ತಿರುವ ಈ ಸಂದರ್ಭದಲ್ಲಿ ಅಭಿಷೇಕ ಮಾಡಿ ಹಾಲು ವ್ಯರ್ಥ ಮಾಡಿರುವುದು ಮೂರ್ಖತನ’ ಎಂದಿದ್ದಾರೆ.
ಅಲ್ಲದೇ ‘ನಾವು ಸೋನು ಸೂದ್ ಅವರನ್ನು ಪ್ರೀತಿಸುತ್ತೇವೆ. ಸೋನು ಸೂದ್ ಮಾಡಿರುವ ಕಾರ್ಯಕ್ಕೆ ದೇಶದ ಜನ ಅವರಿಗೆ ಜೀವನ ಪರ್ಯಂತ ಋಣಿಯಾಗಿರುತ್ತಾರೆ. ಆದರೆ ಸೋನು ಸೂದ್ ಫ್ಲೆಕ್ಸ್ ಮೇಲೆ ಹಾಲು ಸುರಿದಿರುವುದು ಮೂರ್ಖತನ.. ಇದನ್ನು ಸ್ವತಃ ಸೋನು ಸೂದ್ ಸಹ ಇಷ್ಟಪಡುವುದಿಲ್ಲ’ ಎಂದಿದ್ದಾರೆ. ಸದ್ಯ ಈ ರೀತಿ ಟ್ವೀಟ್ ಮಾಡಿದಕ್ಕೆ ನಟಿಯನ್ನ ಈಗ ಸಾಕಷ್ಟು ನೆಟ್ಟಿಗರು ಸೋನು ಫ್ಯಾನ್ಸ್ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








