ಕೆಜಿಎಫ್ 2 : ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಾಕಿಂಗ್ ಸ್ಟಾರ್ ಯಶ್..!
ಬೆಂಗಳೂರು: ಭಾರತೀಯ ಸಿನಿಮಾರಂಗ ಕಾಯುತ್ತಿರುವ ಬಹುನಿರೀಕ್ಷೆಯ KGF 2 ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಜಾಗತಪಕ್ಷಿಗಳಂತೆ ಕಾಯುತ್ತಿದ್ದಾರೆ.. ಈ ನಡುವೆ 20 ಕೋಟಿ ವೀಕ್ಷಣೆ ಕಂಡ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ 22 ಸೆಕೆಂಡಿನ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ 22 ಸೆಕೆಂಡ್ ವಿಡಿಯೋವನ್ನು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಒಟ್ಟು 2 ನಿಮಿಷ 16 ಸೆಕೆಂಡ್ ಇರುವ ಕೆಜಿಎಫ್ ಟೀಸರ್ ಗೆ 84 ಲಕ್ಷ ಲೈಕ್ ಸಿಕ್ಕಿದರೆ, 98 ಸಾವಿರ ಕಮೆಂಟ್ ಬಂದಿದೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಕೆಜಿಎಫ್ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಕುರಿತಾಗಿ ಪ್ರತಿಕ್ಗರಿಯಿಸಿರುವ ಯಶ್ ಅಭಿಮಾನಿಗಳಿಗೆ , ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಅಂದ್ಹಾಗೆ 6 ತಿಂಗಳ ಹಿಂದೆ ಜನವರಿ 7 ರಂದು ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿತ್ತು. ಈಗ ಈ ಟೀಸರ್ ಒಟ್ಟು 20 ಕೋಟಿ ವೀಕ್ಷಣೆ ಕಂಡಿದೆ. ಈ ಟೀಸರ್ ಎಲ್ಲಾ ರೆಕಾರ್ಡ್ ಗಳನ್ನ ಪೀಸ್ ಪೀಸ್ ಮಾಡಿ ವಿಶ್ವ ದಾಖಲೆ ಬರೆದಿದೆ.. ಹೀಗಾಗಿ ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. 22 ಸೆಕೆಂಡ್ ನ ವಿಡಿಯೋ ಹಂಚಿಕೊಳ್ತಿದ್ದಂತೆ ನೆಟ್ಟಿಗರು ಕಮೆಂಟ್ ಗಳಲ್ಲಿ ಸಿನಿಮಾದ ಅಪ್ ಡೇಟ್ ಕೊಡಿ, ರಿಲೀಸ್ ಯಾವಾಗ ಅಂತೆಲ್ಲಾ ಪ್ರಶ್ನೆಗಳ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.







