ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ ರಿಲೀಸ್ – ನಂ 1 ಸ್ಥಾನ ಯಾವ ಸಿನಿಮಾಗೆ..? ಟಾಪ್ 3 ನಲ್ಲಿ ಬಾಲಿವುಡ್ ಗೆ ಜಾಗವಿಲ್ಲ..!
ಅದೊಂದು ಕಾಲವಿತ್ತು… ಬಾರತೀಯ ಸಿನಿಮಾರಂಗ ಅಂದ್ರೆ ಹೊರಗಡೆ ಜಜನ ಬಾಲಿವುಡ್ ಅಂತಲೇ ಅಂದ್ಕೊಂಡಿದ್ರು.. ಬಾಲಿವುಡ್ ಮಂದಿ ಕೂಡ ಬೇರೆ ಸಿನಿಮಾರಂಗ ಲೆಕ್ಕಕ್ಕೇ ಇಲ್ಲ ಎನ್ನುವಂತೆ ಬೀಗುತ್ತಿದ್ದರು.. ಆದ್ರೆ ಈಗ ಕಾಲ ಬದಲಾಗಿದೆ…
ಜೆನರೇಷನ್ , ಜನರ ಯೋಚನೆ ಬದಲಾಗಿದೆ.. ಬಾಲಿವುಡ್ ಮೇಲಿನ ಆಸಕ್ತಿ ಕಳೆದುಕೊಂಡಿರುವ ಜನ ಈಗ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ್ದಾರೆ.. ಬಾಲಿವುಡ್ ನಲ್ಲಿ ದಕ್ಷಿಣ ಭಾರತದ ಸಿನಿಮಾಗಳ ವಿತರಣೆ ಹಕ್ಕು , ಡಬ್ಬಿಂಗ್ ರೈಟ್ಸ್ ರೀಮೇಕ್ ರೈಟ್ಸ್ ಪಡೆಯೋದಕ್ಕೆ ದೊಡ್ಡ ದೊಡ್ಡ ನಿರ್ಮಾಕರು ಫೈಟ್ ಮಾಡಿಕೊಳ್ತಿದ್ದಾರೆ..
ಅದ್ರಲ್ಲೂ ಕಲೆದ 2-3 ವರ್ಷಗಳಲ್ಲಿ ಈ ಮ್ಯಾಜಿಕ್ ಆಗಿದೆ ಅಂತಲೇ ಹೇಳಬಹುದು… ಬೆಲ್ ಬಾಟಂ , ಅನಿಯನ್ ನಂತಹ ಇನ್ನೂ ಹಲವಾರು ಸಿನಿಮಾಗಳು ರೀಮೇಕ್ ಆಗ್ತಿದೆ… ಬ=ಮುಂಬರುವ ಬಹುನಿರೀಕ್ಷೆಯ ದಕ್ಷಿಣ ಭಾರತದ ಸಿನಿಮಾಗಳಿಗೆ ಬಹುಬೇಡಿಕೆ ಬಂದಿದೆ…
ಇನ್ನೂ ಹಾಗೇ ನೋಡೋದಾದ್ರೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಪ್ರಸಾಂತ್ ನೀಲ್ ಕಾಂಬಿನೇಷನ್ ನ KGF ಸಿನಿಮಾ ತನ್ನ ಹವಾ ಸೃಷ್ಟಿ ಮಾಡಿದ ಮೇಲೆ ಸೌತ್ ಸಿನಿಮಾಗಳ ಹೈಪ್ ಹೆಚ್ಚಾಗಿರೋದು ಅಂತ ಹೇಳುದ್ರೂ ತಪ್ಪಾಗೋದಿಲ್ಲ. ಅದಕ್ಕೂ ಮುಂಚೆ ಬಾಹುಲಿ ದಕ್ಷಿಣ ಪಬಾರತದತ್ತ ಬಾಲಿವುಡ್ ಬೆರಾಗು ಗಣ್ಣಿನಲ್ಲಿ ನೋವುಂತೆ ಮಾಡಿತ್ತು.. ಆದ್ರೆ ಅದನ್ನ KGF ಬೇರೆಯದ್ದೇ ಲೆವೆಲ್ ಗೆ ತೆಗೆದುಕೊಂಡು ಹೋಗಿದೆ.. ಯಾಕಂದ್ರೆ KGF ಸಿನಿಮಾದ ಕ್ರೇಜ್ ಇನ್ನೂವರೆಗೂ ಕಡಿಮೆಯಾಗಿಲ್ಲ.. ವಿಶ್ವಾದ್ಯಂತ ಸಿನಿಮಾ ಸೌಂಡ್ ಮಾಡಿದೆ.. ಅಲ್ಲದೇ ಚಾಪ್ಟರ್ 2 ಯಾವಾಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು , ಇಡೀ ಬಾರತೀಯ ಸಿನಿಮಾರಂಗವೇ ತುದಿಗಾಲಿನಲ್ಲಿ ಕಾದುಕುಳಿತಿದೆ..
ಮೇಕರ್ಸ್ ಸ್ಟಾರ್ ನಟರ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮಾಡುವತ್ತ ಫೋಕಸ್ ಮಾಡ್ತಾ ಇದ್ದಾರೆ.. ಹೀಗೆ ಬಿಗ್ ಬಜೆಟ್ ಬಹುನಿರೀಕ್ಷಿತ ದಕ್ಷಿಣ ಭಾರತದ ಸಿನಿಮಾಗಳು ಅಂತ ತೆಗೆದುಕೊಂಡ್ರೆ KGF 2 , ಸಲಾರ್ , ರಾಧೆ ಶ್ಯಾಮ್ , ಪುಷ್ಪಾ, ಮರಕ್ಕರ್ ಇನ್ನೂ ಸಾಕಷ್ಟು ಸಿನಿಮಾಗಳಿವೆ.. ಇದೀಗ ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯನ್ನ IMDb ಬಿಡುಗಡೆ ಮಾಡಿದ್ದು, ಗಮನಾರ್ಹವೆಂದ್ರೆ ಟಾಪ್ 3ನಲ್ಲಿ ಯಾವ ೊಂದು ಬಾಲಿವುಡ್ ಸಿನಿಮಾಗೂ ಸ್ತಾನ ಸಿಕ್ಕಿಲ್ಲ..
ಹೆಮ್ಮಯ ವಿಚಾರ ಅಂದ್ರೆ ಟಾಪ್ 1 ಅಲ್ಲಿ ನಮ್ಮ ಹೆಮ್ಮೆಯ ಕನ್ನಡದ ಸಿನಿಮಾ KGF ಚಾಪ್ಟರ್ 2 ಇದೆ.. ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ಕೆಜಿಎಫ್-2 ಸಿನಿಮಾ ಅಗ್ರಸ್ಥಾನದಲ್ಲಿದೆ. 27.5%ರೊಂದಿಗೆ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ.
24.3% ರೊಂದಿಗೆ ತೆಲುಗಿನ ಪುಷ್ಪ ಸಿನಿಮಾ 2ನೇ ಸ್ಥಾನದಲ್ಲಿದೆ. ಕುತೂಹಲಕಾರಿ ವಿಚಾರವೆಂದರೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕೊನೆಯ ಕ್ಷಣದ ವರೆಗೂ ಮೊದಲ ಸ್ಥಾನದಲ್ಲಿತ್ತು. ಬಳಿಕ ಕೆಜಿಎಫ್-2 ಸಿನಿಮಾ ಹೆಚ್ಚು ಮತಗಳಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ.
ಇನ್ನು ಮೂರನೆ ಸ್ಥಾನದಲ್ಲಿ ಮೋಹನ್ ಲಾಲ್ ನಟನೆಯ ಮರಕ್ಕರ್: ಅರೇಬಿಯನ್ ಸಿ ಲಯನ್ ಸಿನಿಮಾವಿದೆ. ಈ ಸಿನಿಮಾ 8.7% ರಷ್ಟು ಮತ ಪಡೆದಿದೆ. 4ನೇ ಸ್ಥಾನದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಸಿನಿಮಾವಿದೆ.