ಬೆಂಗಳೂರಿನ ಇಂದಿರಾನಗರದಲ್ಲಿನ ಒಂದೇ ಮನೆಯಲ್ಲಿ ಖದೀಮರು ಸತತ ಎರಡು ದಿನ ಕಳ್ಳತನ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಮೊದಲ ದಿನ ನಡೆದ ಕಳ್ಳತನದ ವಿರುದ್ಧ ಮಾಲೀಕ ಲಿಂಗಪ್ಪ ದೂರು ದಾಖಲಿಸಿದ್ದರು. ನಂತರ ಎರಡನೇ ದಿನವೂ ಖದೀಮರು ಅದೇ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳರಿಗೆ ಹೆದರಿ ಮನೆಯ ಮಾಲೀಕ ಲಿಂಗಪ್ಪ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖದೀಮರು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಸಿಸಿಟಿವಿಗೆ ಬೈಕ್ ಹೆಡ್ ಲೈಟ್ ಹಾಕಿ ಏನೂ ಕಾಣದಂತೆ ಖದೀಮ ಮಾಡಿದ್ದಾರೆ. ಮೊದಲ ದಿನ ಕಳ್ಳತನದಲ್ಲಿ 40 ಸಾವಿರ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಎರಡನೇ ದಿನವೂ ಕೈಗೆ ಸಿಕ್ಕ ವಸ್ತುಗಳನ್ನು ದೋಚಿದ್ದಾರೆ ಎಂದು ದೂರು ದಾಖಲಾಗಿದೆ.








