kiccha sudeep ಕಿಚ್ಚ ಸುದೀಪ್ ಗೆ ಶಿವಗಂಗಾ ಶ್ರೀ ಪ್ರಶಸ್ತಿ
ನೆಲಮಂಗಲ : ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಮೇಲಣಗವಿ ಮಠದಿಂದ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ನಟ ಕಿಚ್ಚ ಸುದೀಪ್ ಗೆ ಶಿವಗಂಗಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಗರದ ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆಯ ಮೇಲಣಗವಿ ಮಠದಲ್ಲಿ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ನಟ ಸುದೀಪ್ ಅವರಿಗೆ ಪ್ರತಿಷ್ಟಿತ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಸುದೀಪ್, ಬಹಳ ತೂಕ ತೆಗೆದುಕೊಂಡು ಮನೆಗೆ ಹೋಗುತ್ತಿದ್ದೇನೆ.
ಈ ಪ್ರಶಸ್ತಿಯಿಂದ ಕುಟುಂಬದ ಬಗ್ಗೆ ಹೆಮ್ಮೆ ಇರಲಿ ಎಲ್ಲರೂ ಅಭಿಮಾನದಿಂದ ಶರಣಾಗೋಣ ಎಂದರು. ಇದೇ ವೇಳೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು.
