India Vs Shrilanka Test : ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಅಪ್ಪು ಫೋಟೋ ಜೊತೆ ಸುದೀಪ್ ದರ್ಶನ…!!!
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯ ವೀಕ್ಷಣೆಗೆ ತೆರಳಿದ್ದ ಕಿಚ್ಚ ಸೂದೀಪ್ ಅವರು ಅಪ್ಪು ಫೋಟೋ ಜೊತೆಗೆ ಕಾಣಿಸಿಕೊಂಡರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ನಿನ್ನೆಯಿಂದ ಆರಂಭವಾಗಿದೆ. 2 ವರ್ಷಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು ಈ ಪಂದ್ಯವನ್ನು ವೀಕ್ಷಿಸಲು ಸುದೀಪ್ ಕೂಡ ಚಿನ್ನಸ್ವಾಮಿ ಅಂಗಳಕ್ಕೆ ತೆರಳಿದ್ದರು.. ಈ ವೇಳೆ ಅಭಿಮಾನಿಯೊಬ್ಬರು ಪುನೀತ್ ರಾಜ್ ಕುಮಾರ್ ಅವರ ಫೋಟೋ ಹಿಡಿದುಕೊಂಡು ಬಂದಿದ್ದರು.. ಅವರೊಂದಿಗೆ ಸುದೀಪ್ ಕೂಡ ನಿಂತಿದ್ದದ್ದು ಕಂಡುಬಂತು.
ಅಭಿಮಾನಿ ತಂದಿರುವ ಪೋಸ್ಟರ್‌ನಲ್ಲಿ ಅಪ್ಪು ಫೋಟೋ ಜೊತೆಗೆ ನಾವು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆಯಲಾಗಿದೆ. ಸದ್ಯ ಸುದೀಪ್, ಅಪ್ಪು ಪೋಸ್ಟರ್ ಜೊತೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.