ಮಹಾಸೇವನ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆಯಲ್ಲಿ 5000 ಮಹಿಳಾ ಅಭಿಮಾನಿಗಳು..!
ಕಿಚ್ಚ ಸುದೀಪ್ ಗೆ ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇದು ಹೊಸ ವಿಚಾರವೇನಲ್ಲ. ಇದೀಗ ಕಿಚ್ಚನ ಮಹಿಲಾ ಅಭಿಮಾನಿಗಳು ಸೇರಿ ಮಹಿಳಾ ಮಹಾ ಸೇನೆಯನ್ನು ಕಟ್ಟಿದ್ದಾರೆ. ಹೌದು 5000 ಮಹಿಳಾ ಸದಸ್ಯರಿರುವ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಮಹಿಳೆಯರೇ ಈ ಸಂಘ ಕಟ್ಟಿದ್ದಾರೆ. ಈ ಸೇನೆಗೆ ‘ಮಹಾಸೇವನ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ’ ಎಂದು ಹೆಸರಿಡಲಾಗಿದೆ. ವಿಶೇಷ ಅಂದ್ರೆ ಈ ರೀತಿ 5000 ಮಹಿಳೆಯರೇ ಇರುವ ಅಭಿಮಾನಿ ಸಂಘ ಭಾರತದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ.
‘ಫೋರ್ಬ್ಸ್ ಇಂಡಿಯಾ’ ಯುವ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದ ಕೀರ್ತಿ ಸುರೇಶ್..!
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮಹಿಳೆಯರು ಸೇರಿ ಈ ಸಂಘ ಕಟ್ಟಿದ್ದು, ಈ ಮಹಿಳಾ ಅಭಿಮಾನಿ ಸಂಘವು ಕಿಚ್ಚ ಚಾರಿಟೇಬಲ್ ಸೊಸೈಟಿ ಅಡಿಯಲ್ಲಿ ಕೆಲಸ ಮಾಡಲಿದೆ. ತಮ್ಮ ಸಂಘದ ಮುಖ್ಯ ಮಹಿಳೆಯರು ವಿಡಿಯೋ ಒಂದನ್ನು ಸಹ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ನಟ ಸುದೀಪ್, ‘ಇದು ಬಹಳ ಮಧುರವಾದುದ್ದು, ಎಲ್ಲರಿಗೂ ಧನ್ಯವಾದ’ ಎಂದು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.
ಭಾರತದಲ್ಲಿಯೇ ಪ್ರಥಮ.
5000 ಮಹಿಳಾ ಸದಸ್ಯರೇ ಹೊಂದಿರುವ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಮಹಿಳಾ ಮಹಾ ಸೇನೆ.
ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಅಡಿಯಲ್ಲಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಮಹಿಳೆಯರು ಹೆಜ್ಜೆ ಹಾಕುತ್ತಿದ್ದಾರೆ.
UTube🔗 https://t.co/94on8nJSRm#ಮೊದಲು_ಮಾನವನಾಗು@KicchaSudeep @iampriya06@Kitty_R7 pic.twitter.com/rqxfA6szr2— Kichcha Sudeepa Charitable Society (@KSCS__Official) February 5, 2021
ಇನ್ಸ್ಟಾಗ್ರಾಂನಲ್ಲಿ ಸಮಂತಾ ಹೊಸ ಸಾಧನೆ – 15 ಮಿಲಿಯನ್ ಫಾಲೋವರ್ಸ್..!
ಅಭಿಮಾನಿಗಳ ‘ದಾಸ’ನ ‘ಮೆಜೆಸ್ಟಿಕ್’ ತೆರೆಕಂಡು 19 ವರ್ಷ..!
ಬಿಗ್ ಬಾಸ್ ಕನ್ನಡ – 8 : ಯಾವಾಗಿನಿಂದ ಆರಂಭದ : ಡೇಟ್ ಫಿಕ್ಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel