“ಕಿಮ್ ಸಾಮ್ರಾಜ್ಯ”ದಲ್ಲಿ ಆಹಾರಕ್ಕೆ “ಹಾಹಾಕಾರ”…! ಕಡಿಮೆ ತಿನ್ನುವಂತೆ ಮನವಿ ಮಾಡಿದ ಹುಚ್ಚು ದೊರೆ
ಉತ್ತರ ಕೊರಿಯಾ…. ಈ ಹೆಸರು ಕೇಳಿದ್ರೆ ಕಣ್ಮುಂದೆ ಬರೋದು ಮತ್ಯಾರು ಅಲ್ಲ ಅದೇ ದೇಶದ ಹುಚ್ಚ ದೊರೆ… ಆಧುನಿಕ ಜಗತ್ತಿನ ಕ್ರೂರ ಸರ್ವಾಧಿಕಾರಿ… ಅಣುಬಾಂಬ್ ತಯಾರಿಕೆಯ ಹಿಂದೆ ಹುಚ್ಚು ಕುದರೆಯಂತೆ ಬಿದ್ದಿರುವ ಆ ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್…
ಈತ ಅಷ್ಟೇ ಅಲ್ಲ ಈತನ ಇಡೀ ಖಾಂದಾನ್ ಆ ದೇಶದ ಜನರ ನಿಕಟ ಶತ್ರು ಅಂದ್ರೂ ತಪ್ಪಾಗೋದಿಲ್ಲ. ಈ ಕುಟುಂಬ ದೊರೆಗಳು ಮಾಡುವ ರೂಲ್ಸ್ ಒಂದಾ ಎರೆಡಾ.. ಅಲ್ಲಿನ ಜನರ ಬದುಕು ನರಕ ಆಗೋಕೆ ಏನೆಲ್ಲಾ ಬೇಕೋ ಅದೆಲ್ಲಾ ಮಾಡ್ತಾರೆ. ವಿಚಿತ್ರ ಕಾನೂನುಗಳು… ಅಣುಬಾಂಬ್ ತಯಾರಿಕೆ , ಮಿಸಾಯಿಲ್ ಪರೀಕ್ಷೆ ಅಂತಹ ವಿಚಾರಗಳ ಹಿರತಾಗಿ ಹುಚ್ಚ ಕಿಮ್ ಜಾಂಗ್ ಉನ್ ಸರ್ಕಾರದ ನೀತಿಗಳು ಕೆಲವೊಮ್ಮೆ ವ್ಯಾಪಕವಾಗಿ ಸುದ್ದಿಯಾಗುತ್ತೆ..
ಇತ್ತೀಚೆಗೆ ಈ ದೇಶದ ಕೆಟ್ಟ ಆರ್ಥಿಕ ಪರಿಸ್ಥಿತಿ ವರದಿಯಾಗಿದೆ. ಈ ನಡುವೆ ಕಿಮ್ ಸರ್ಕಾರ ಹೊಸ ಹೊಸ ನಿಯಮಗಳನ್ನ ತರುತ್ತಾ ಜನರನ್ನ ಮತ್ತಷ್ಟು ಕಾಡ್ತಾಯಿದೆ. ಇದೀಗ ಆಹಾರಕ್ಕೆ ಹಾಹಾಕಾರ ಶುರುವಾಗಿದೆ. ಹೀಗಾಗಿ ಕಿಮ್ ಕಡಿಮೆ ಆಹಾರ ಸೇವಿಸುವಂತೆ ಜನರಿಗೆ ಸಂದೇಶ ನೀಡಿದ್ದಾರಂತೆ.
ಹೌದು ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದೆ. ಜನರು 2025 ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಕಿಮ್ ಜಾಂಗ್ ಉನ್ ಮನವಿ ಮಾಡಿರುವುದು ಸಖತ್ ಸುದ್ದಿಯಾಗುತ್ತದೆ. ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಸಮಸ್ಯೆ ಎದರುರಾಗುತ್ತಿರುವುದು ಹೊಸದೇನಲ್ಲ. ಈ ಹಿಂದೆಯೂ ಹಲವು ಬಾರಿ ಆಹಾರ ಬಿಕ್ಕಟ್ಟನ್ನು ಎದುರಿಸಿದೆ. 1990ರಲ್ಲಿ ಉಂಟಾಗಿದ್ದ ಆಹಾರದ ಕೊರತೆಯಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
2025ರೊಳಗೆ ಚೀನಾ ಜೊತೆಗಿನ ಗಡಿಯನ್ನು ಪುನಾರಂಭಿಸುವವರೆಗೆ ದೇಶದ ಜನರು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕೆಂದು ಕಿಮ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉತ್ತರ ಕೊರಿಯಾದ ಜನರಿಗೆ ಈಗಾಗಲೇ ಆಹಾರ ಕೊರತೆ ಎದುರಾಗಿದೆ. ಇನ್ನೂ 3 ವರ್ಷಗಳ ಕಾಲ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಕೊರೊನಾ ಹಾಗೂ ಭಾರೀ ಮಳೆಯಿಂದಾಗಿಯೇ ಉತ್ತರಕೊರಿಯಾಗೆ ಈ ಪರಿಸ್ಥಿತಿ ಬಂದಿದೆ ಎನ್ನಲಾಗಿದೆ. ಇನ್ನೂ ಕೆಲ ತಿಂಗಳ ಹಿಂದೆ ಉತ್ತರ ಕೊರಿಯಾದಲ್ಲಿ ಮಾಂಸದ ಕೊರತೆ ತೀವ್ರವಾಗಿ ಕಾಡಿತ್ತು. ಆಗ ಕಿಮ್ ಜಾಂಗ್ ಉನ್ , ಸಾಕುನಾಯಿಗಳನ್ನ ಕೂಡ ಆಹಾತಕ್ಕಾಗಿ ನೀಡುವಂತೆ ಆದೇಶ ಹೊರಡಿಸಿದ್ದ. ಇದು ಜನರಿಗೆ ದೊಡ್ಡ ಆಗಾತವೇ ಆಗಿತ್ತು. ಇಡೀ ಜಗತ್ತಿನಾದ್ಯಂತ ಈ ಸುದ್ದಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು.








