ಉತ್ತರ ಕೊರಿಯಾದಲ್ಲಿ ಪ್ರೀ ನರ್ಸರಿ ಮಕ್ಕಳಿಗೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗುಣಗಾನ ಕಡ್ಡಾಯ
ಸಿಯೋಲ್, ಸೆಪ್ಟೆಂಬರ್19: ಉತ್ತರ ಕೊರಿಯಾದಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬಗ್ಗೆ ಗುಣಗಾನ ಮಾಡುವ ಗುರಿಯನ್ನು ಹೊಂದಿರುವ ಮತ್ತೊಂದು ಕಾನೂನನ್ನು ಜಾರಿಗೆ ತರಲಾಗಿದೆ.
ಹೊಸ ಪಠ್ಯಕ್ರಮದ ಪ್ರಕಾರ ಪ್ರೀ ನರ್ಸರಿ ಮಕ್ಕಳು ದಿನಕ್ಕೆ ಕನಿಷ್ಠ 90 ನಿಮಿಷ ತಮ್ಮ ಸರ್ವೋಚ್ಚ ನಾಯಕ ಕಿಮ್ ಜೊಂಗ್-ಉನ್ ನ ಮಹಾನ್ ಸಾಧನೆಯ ಬಗ್ಗೆ ಕಲಿಯುವುದು ಕಡ್ಡಾಯವಾಗಿದೆ.
ವಿಶೇಷವೆಂದರೆ, ಈ ಮೊದಲು, ಶಾಲಾಪೂರ್ವ ಮಕ್ಕಳು ಕಿಮ್ ಜೊಂಗ್ ಉನ್‌ನ ಗುಣಗಾನ ಮಾಡುವ 30 ನಿಮಿಷಗಳ ತರಗತಿಗೆ ಹಾಜರಾಗಬೇಕಾಗಿತ್ತು. ಈಗ ಅವರು ಕಿಮ್ ಜೊಂಗ್ ಉನ್ ಮತ್ತು ಕಿಮ್ ಯೋ ಜೊಂಗ್ ಅವರ ಬಾಲ್ಯದ ಬಗ್ಗೆ ಕಲಿಯಲು ಒಂದು ಗಂಟೆ ಕಳೆಯಬೇಕಾಗುತ್ತದೆ. ಮತ್ತು ಇನ್ನೂ 30 ನಿಮಿಷಗಳು ಈ ನಾಯಕರ ಬಾಲ್ಯದ ಕ್ರಾಂತಿಕಾರಿ ವಿಷಯಗಳನ್ನು ಕಲಿಯಬೇಕಾಗುತ್ತದೆ.
ವರದಿಗಳ ಪ್ರಕಾರ, ಹೊಸ ಆಜ್ಞೆಯನ್ನು ಕಿಮ್ ಜೊಂಗ್ ಉನ್ ಅವರ ಸಹೋದರಿ ಕಿಮ್ ಯೋ ಜೊಂಗ್ ಆದೇಶಿಸಿದ್ದಾರೆ. ಇತ್ತೀಚೆಗೆ ದೇಶಾದ್ಯಂತದ ಶ್ರೇಷ್ಠತೆ ಶಿಕ್ಷಣ ಎಂದು ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ನಿರ್ದೇಶಿಸಿದ್ದಾರೆ.
ವರದಿಯ ಪ್ರಕಾರ, ಕಿಮ್ ಯೋ ಜೊಂಗ್ ಉತ್ತರ ಕೊರಿಯಾದ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದರೆ, ದಕ್ಷಿಣ ಕೊರಿಯಾದ ಗುಪ್ತಚರ ಮಾಹಿತಿ ಪ್ರಕಾರ ಕಿಮ್ ಜೊಂಗ್-ಉನ್ ವಾಸ್ತವಿಕ ನಾಯಕನಾಗಿದ್ದಾರೆ.
ಆಗಸ್ಟ್ 25 ರಂದು ಪರಿಚಯಿಸಲಾದ ‘ಗ್ರೇಟ್ನೆಸ್ ಎಜುಕೇಶನ್’ ಕುರಿತ ಈ ಹೊಸ ಆಜ್ಞೆಯು ಉತ್ತರ ಕೊರಿಯಾದ ನಾಯಕತ್ವದ ಬಗ್ಗೆ ನಿಷ್ಠೆ ಮತ್ತು ವಿಶ್ವಾಸವನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದು ಸಿಯೋಲ್ ಮೂಲದ ಡೈಲಿ ಎನ್ಕೆ ವರದಿ ಮಾಡಿದೆ.
ಹೊಸ ಪಠ್ಯಕ್ರಮವು ಶಾಲಾಪೂರ್ವ ಮಕ್ಕಳಿಗೆ ಕಿಮ್ ಜೊಂಗ್ ಉನ್ ಕೇವಲ ಐದು ವರ್ಷ ವಯಸ್ಸಿನಲ್ಲೇ ಹೆಚ್ಚು ಬುದ್ಧಿವಂತ ಮಗು ಎಂದು ಹೇಳುತ್ತದೆ. ಕಿಮ್ ಜೊಂಗ್ ಉನ್ ಬೇಟೆಯಾಡುತ್ತಿದ್ದರು, ಬಿಲ್ಲುಗಾರಿಕೆ ಅಭ್ಯಾಸ ಮಾಡಿದ್ದರು ಮತ್ತು ಓದಲು ಇಷ್ಟಪಡುತ್ತಿದ್ದರು ಎಂದು ತಿಳಿಸುತ್ತದೆ.








