ಕೋಲ್ಕತ್ತಾ: ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿದ್ದ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ. ಹೀಗಾಗಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಶಯ ಹರಿದು ಬರುತ್ತಿವೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಸಾಧನೆಗೆ ಶುಭ ಕೋರಿ, ಕೊಂಡಾಡಿದ್ದಾರೆ. ಅಲ್ಲದೇ, ಶೀಘ್ರದಲ್ಲಿಯೇ 50ನೇ ಶತಕ ದಾಖಲಿಸುವಂತೆ ಹಾರೈಸಿದ್ದಾರೆ.
ಈ ಸಾಧನೆಯನ್ನು ಐಸಿಸಿ, ಗ್ರೇಟ್ ನೆಸ್ ಮೀಟ್ಸ್ ಗ್ರೇಟ್ ನೆಸ್. ಕಿಂಗ್ ಕೊಹ್ಲಿಗೆ 49ನೇ ಶತಕ ಎಂದು ಬರೆದು ಕೊಹ್ಲಿ ಹಾಗೂ ಸಚಿನ್ ಮುಖಾಮುಖಿಯಾಗಿ ನಿಂತಿರುವ ಫೋಟೋ ಹಾಕಿ ಮೆಚ್ಚುಗೆಯ ಮಾತು ಆಡಿದೆ.
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸಚಿನ್ ದಾಖಲೆ ಸರಿಗಟ್ಟಲು ಸಿಕ್ಕಿದ್ದು ಎಂಥಾ ದಿನ..? ಐತಿಹಾಸಿಕ ಈಡನ್ ಗಾರ್ಡನ್ಸ್ ನಲ್ಲಿ ಕೊಹ್ಲಿ ಬರ್ತ್ ಡೇ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಭಾರತೀಯ ಆಟಗಾರರು ಸೇರಿದಂತೆ ವಿದೇಶಿ ಆಟಗಾರರು ಕೂಡ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.