ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ಅವರ ‘ಕೂ’ ಕ್ರಿಕೆಟ್ ಗೀತೆ

1 min read

ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ಅವರ ‘ಕೂ’ ಕ್ರಿಕೆಟ್ ಗೀತೆ

ನೆಟ್ಟಿಗರ ಮೈನವಿರೇಳಿಸಿದೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಗಾಗಿ ಸಂಯೋಜಿಸಿದ ‘ಕೂ ಪೇ ಬೊಲೆಗಾ’ ಹಾಡು

ಬೆಂಗಳೂರು: ಟಿ20 ವಿಶ್ವಕಪ್ ಕ್ರಿಕೆಟ್ ನ ಕ್ರೇಜ್ ಈಗಾಗಲೇ ಎಲ್ಲೆಡೆ ಮನೆಮಾಡಿದೆ. ಇದನ್ನು ಹೆಚ್ಚಿಸಲು ಕೂ ಆಪ್ ‘ಕೂ ಪೆ ಬೊಲೆಗಾ’ ಎಂಬ ಆಕರ್ಷಕ ಗೀತೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಟಿ-20 ವಿಶ್ವಕಪ್ 2021 ರ ಸರಣಿಯ ಈ ಸಮಯದಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸುವ ಅಭಿಮಾನಿಗಳ ಉತ್ಸಾಹವನ್ನು ಈ ಗೀತೆ ಪ್ರತಿಧ್ವನಿಸುತ್ತದೆ.

ಜನಪ್ರಿಯ ಗಾಯಕ ಬೆನ್ನಿ ದಯಾಳ್ ಸಂಗೀತ ಸಂಯೋಜಿಸಿ ಹಾಡಿರುವ ಆಕರ್ಷಕ ಗೀತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಸೆಳೆದಿದೆ. ಗೀತೆ ಬಿಡುಗಡೆಗೊಂಡಾಗಿನಿಂದ ಬೆನ್ನಿ ದಯಾಳ್ ಅವರ ಫಾಲೋವರ್ಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಬೆನ್ನಿ ದಯಾಳ್ ಅವರು 16 ಭಾಷೆಗಳಲ್ಲಿ 2000 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ ಮತ್ತು ಕೂಗಾಗಿ ಈ ಗೀತೆಯು ಭಾರತೀಯ ಭಾಷೆಗಳಾದ್ಯಂತ ಬಳಕೆದಾರರ ಪ್ರತಿಕ್ರಿಯೆಗಳೊಂದಿಗೆ ಪ್ರತಿಧ್ವನಿಸುತ್ತಿದೆ.

https://www.kooapp.com/profile/BennyDayal

 

 

ಗಾಯಕ ಬೆನ್ನಿ ದಯಾಳ್ ಕ್ರಿಕೆಟ್ ಗೀತೆಯನ್ನು ಹಂಚಿಕೊಳ್ಳುವ ಮೂಲಕ ” ಕ್ರಿಕೆಟ್ ಜ್ವರ ಈಗ ಆರಂಭಗೊಂಡಿದೆ! ನೀಲಿ ಜರ್ಸಿಯ ಹುಡುಗರನ್ನ ಹುರಿದುಂಬಿಸಲು ನಾವು ಮತ್ತೊಮ್ಮೆ ಸಜ್ಜಾಗಿದ್ದೇವೆ. ಅದು ಗೆಲುವೇ ಆಗಿರಲಿ ಸೋಲೆ ಆಗಿರಲಿ, ಇಡೀ ರಾಷ್ಟ್ರ ನಮ್ಮ ಚಾಂಪಿಯನ್ ಗಳಿಗಾಗಿ ಕೂ ಗೀತೆಯ ಜೊತೆಗೆ #ಕೂನಲ್ಲಿಮಾತನಾಡುತ್ತಾರೆ, ಈ ಹಾಡಿಗೆ ನನ್ನೊಂದಿಗೆ ದನಿಗೂಡಿಸಿ, ಉತ್ಸಾಹ ಕುಂದದಂತೆ, ಈ ಕ್ರಿಕೆಟ್ ಸೀಸನನ್ನು ಪರಿಪೂರ್ಣ ಹುರುಪಿನೊಂದಿಗೆ ಪ್ರೋತ್ಸಾಹಿಸೋಣ ” ಎಂದು ಕೂ ಮಾಡಿದ್ದಾರೆ.

ಪುನೀತ್ ಸಾವಿನ ಸುದ್ದಿ ಕೇಳಿ ಮೂವರು ಅಭಿಮಾನಿಗಳು  ಸಾವು – ಆತ್ಮಹತ್ಯೆಗೆ ಯತ್ನಿಸಿದ ಮೂವರು

ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗೆ ವೇದಿಕೆಯಾದ Koo (ಕೂ)ಅಪ್ಲಿಕೇಶನ್ ಕ್ರಿಕೆಟ್ ಅಭಿಮಾನಿಗಳಿಗೆ ಸಮೃದ್ಧ, ಮನಮುಟ್ಟುವ ಹಾಗು ತೀರಾ ಸ್ಥಳೀಯ ಎನಿಸುವ ಅನುಭವವನ್ನು ನೀಡುತ್ತದೆ. ಕ್ರಿಕೆಟ್ ಗೀತೆಯ ಜೊತೆಗೆ, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಅವರ ಮಾತೃಭಾಷೆಯಲ್ಲಿ ಪರಸ್ಪರ ತೊಡಗಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು Koo (ಕೂ) ತನ್ನ ಮೊಟ್ಟಮೊದಲ ದೂರದರ್ಶನ ಅಭಿಯಾನವನ್ನು (TVC) #KooKiyaKya – ಹ್ಯಾಶ್‌ಟ್ಯಾಗ್ ಜೊತೆಗೆ ಸ್ಕ್ರಿಪ್ಟ್ ಮಾಡಿದೆ. ಈ TVC – ಚಮತ್ಕಾರಿ ಮಾತುಗಳು, ಬುದ್ಧಿವಂತಿಕೆ ಮತ್ತು ಹಾಸ್ಯದೊಂದಿಗೆ ಕಿರು-ಸ್ವರೂಪದ ಜಾಹೀರಾತುಗಳ ಸರಣಿಯನ್ನು ಒಳಗೊಂಡಿರುತ್ತದೆ – ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವ ಬಳಕೆದಾರರ ಬಯಕೆಯನ್ನು ಪ್ರತಿಬಿಂಬಿಸುತ್ತದೆ. ವೇದಿಕೆಯು ಅತ್ಯಾಕರ್ಷಕ ಬಳಕೆದಾರರ ಸ್ಪರ್ಧೆಯನ್ನು ಘೋಷಿಸಿದ್ದು- ಕೂ ಕ್ರಿಯೇಟರ್ ಕಪ್, ಕೂ ನಲ್ಲಿನ ಕ್ರಿಯೇಟರ್ ಗಳು ತಮ್ಮ ಸೃಜನಶೀಲತೆಯನ್ನು ಮೀಮ್, ವೀಡಿಯೊಗಳು ಅಥವಾ ನೈಜ-ಸಮಯದ #ಕೂಮೆಂಟರಿ ಮೂಲಕ ಪಂದ್ಯಗಳಲ್ಲಿ ಭಾಗವಹಿಸಬಹುದಾಗಿದೆ. ಈ ಮೂಲಕ ಅತ್ಯಾಕರ್ಷಕ ಬಹುಮಾನಗಳನ್ನು ಸಹ ಗೆಲ್ಲಬಹುದಾಗಿದೆ.

ರಷೀದ್ ಖಾನ್ ವಿಶೇಷ ದಾಖಲೆ T-20 ಕ್ರಿಕೆಟ್ನಲ್ಲಿ ವೇಗವಾಗಿ 100 ವಿಕೆಟ್

ಕೂ ವಕ್ತಾರರು ಹೇಳುವಂತೆ” ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಪ್ರತಿಯೊಬ್ಬ ಭಾರತಿಯನನ್ನು ಅವರ ಮಾತೃಭಾಷೆಯಲ್ಲಿ ಸಂಪರ್ಕಿಸುವ ಗುರಿಯನ್ನು ಹೊಂದಿದೆ, ನಾವು ಭಾರತೀಯ ಆಚರಣೆಗಳ ರಾಯಭಾರಿಯಾಗಿದ್ದೇವೆ. ನಮಗೆ ಕ್ರಿಕೆಟ್ ಎನ್ನುವುದು ಉತ್ಸಾಹವನ್ನು ಹೊಮ್ಮಿಸುವ ಭಾವನೆ. ಪ್ರತಿಭಾವಂತ ಬೆನ್ನಿ ದಯಾಳ್ ಅವರು ನಮ್ಮ ಕ್ರಿಕೆಟ್ ಗೀತೆಯನ್ನು ಅತ್ಯಂತ ಅದ್ಭುತವಾಗಿ ಸಂಯೋಜಿಸಿದ್ದು ನಮಗೆ ಗೌರವ ತಂದಿದೆ. ನಮ್ಮ TVC ಅಭಿಯಾನ, ಕೂ ಕ್ರಿಯೇಟರ್ ಕಪ್ ಮತ್ತು ನೈಜ ಸಮಯದ ವೀಕ್ಷಕ ವಿವರಣೆ ಜೊತೆಗೆ ಬಳಕೆದಾರರು ತೊಡಗಿಸಿಕೊಂಡಾಗ ಮತ್ತು #KooKiyaKya ಮೂಲಕ ಸಂಪರ್ಕಗೊಂಡಾಗ ಈ ಗೀತೆ ಆಕರ್ಷಕ ಅನುಭವವನ್ನು ನೀಡುತ್ತದೆ.” ಎಂದು ಹೇಳಿದರು.

ತಮ್ಮನನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಿರುವ ಶಿವಣ್ಣ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd