ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ (Bank Robbery) ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವಿಷಯವಾಗಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ (Anupam Agarwal), ಬೇಧಿಸಲು ಗುಪ್ತಚರ ಇಲಾಖೆ (Intelligence Department) ಸಹಾಯ ಮಾಡಿದೆ ಎಂದು ಹೇಳಇದ್ದಾರೆ. ಮುಂಬೈ (Mumbai) ಮೂಲದ ಗ್ಯಾಂಗ್‌ನಿಂದ ದರೋಡೆ ನಡೆದಿದೆ. ತಮಿಳುನಾಡು ಮೂಲದವರಾದ ದರೋಡೆಕೋರರು ದರೋಡೆ ಮಾಡಲೆಂದೇ ಮಂಗಳೂರಿಗೆ ಬಂದಿದ್ದರು. ಆನಂತರ ಅವರು ಕೇರಳದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು. ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧನ ಮಾಡಿದ್ದೇವೆ. ಮುರುಗಂಡಿ ದೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್. ಪ್ರಕಾಶ್@ಜೋಶ್ವಾ, ಮಣಿವಣ್ಣನ್‌ನನ್ನೂ ಬಂಧನ ಮಾಡಿದ್ದೇವೆ. ತಮಿಳುನಾಡಿನ ತಿರುವನ್ನೇಲಿಯಿಂದ ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದೆ. ಬಂಧಿತರಿಂದ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ.ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.








