kyash patel
ಅಮೆರಿಕ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ, ಭಾರತೀಯ ಅಮೆರಿಕನ್ ಕ್ಯಾಶ್ ಪಟೇಲ್ ಅವರನ್ನು ನೇಮಕ ಮಾಡಿರುವುದಾಗಿ ಅಮೆರಿಕನ್ ಸರ್ಕಾರ ತಿಳಿಸಿದೆ. ಮಿಲ್ಲರ್ ಅವರು ರಕ್ಷಣಾ ಇಲಾಖೆಯ ಎಲ್ಲ ಕಾರ್ಯಚಟವಟಿಕೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರೋದಾಗಿ ಪೆಂಟಗನ್ ಭವನದ ಪ್ರಕಟಣೆಯಲ್ಲಿ ತಿಳಿದುಬಂದಿದೆ. ಇದರ ಬೆನ್ನಲ್ಲೇ ಕ್ಯಾಶ್ ಪಟೇಲ್ ಅವರನ್ನು ಮಿಲ್ಲರ್ ಅವರು ತಮ್ಮ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ತಿಳಿದುಬಂದಿದೆ.
ಅಂದ್ಹಾಗೆ ಕ್ಯಾಶ್ ಪಟೇಲ್ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದರು. ಇದೀಗ ಅವರನ್ನು ಮಿಲ್ಲರ್ ಅವರು ತಮ್ಮ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ಅವರನ್ನು ವಜಾಮಾಡಿ, ಆ ಸ್ಥಾನಕ್ಕೆ ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ಕೇಂದ್ರದ ನಿರ್ದೇಶಕರಾಗಿದ್ದ ಕ್ರಿಸ್ ಮಿಲ್ಲರ್ ಅವರನ್ನು ನೇಮಿಸಿದ್ದರು. ಇದಾದ ನಂತರವೇ ಜೆನ್ ಸ್ಟ್ರೀವರ್ಟ್ ಅವರ ರಾಜೀನಾಮೆಯಿಂದ ತೆರವಾದ ಮಿಲ್ಲರ್ ಅವರ ಸಿಬ್ಬಂದಿ ಸ್ಥಾನಕ್ಕೆ ಕ್ಯಾಶ್ ಪಟೇಲ್ ಅವರನ್ನ ನೇಮಕಮಾಡಲಾಗಿರೋದಾಗಿ ಪೆಂಟಗಾನ್ ಪ್ರಕಟಣೆಯಿಂದ ತಿಳಿದುಬಂದಿದೆ.
kyash patel
ಪಟಾಕಿ ಬ್ಯಾನ್ : ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್
ಸಾಲು ಸಾಲು ಸೋಲುಗಳಿಂದ ಬೇಸತ್ತ ‘ರಾಗಾ’ ಮರಳು ದಿಬ್ಬಕ್ಕೆ ಪಯಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel