ನೈಸರ್ಗಿಕ ಕೃಷಿ ವಿಧಾನದಿಂದ ಭೂಮಿ ಸಮೃದ್ಧವಾಗುತ್ತದೆ : ಪ್ರಧಾನಿ ನರೇಂದ್ರ ಮೋದಿ Narendra Modi saaksha tv
ನವದೆಹಲಿ : ನೈಸರ್ಗಿಕ ಕೃಷಿ ವಿಧಾನ ಅನುಸರಿಸುವುದರಿಂದ ಹಲವು ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಭೂಮಿ ಸಮೃದ್ಧವಾಗುತ್ತದೆ. ನೀರಿನ ಅಗತ್ಯವೂ ಕಡಿಮೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ಇಂದು ನೈಸರ್ಗಿಕ ಕೃಷಿ ವಿಧಾನದ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು, ನೈಸರ್ಗಿಕ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ನೀಡುವ ಈ ಕಾರ್ಯಕ್ರಮ ಮಹತ್ವಪೂರ್ಣದ್ದಾಗಿದೆ. ತಂತ್ರಜ್ಞಾನದ ಮೂಲಕ ದೇಶದ 8 ಕೋಟಿ ರೈತರು ಇಂದು ನಮ್ಮೊಂದಿಗೆ ಭಾಗಿಯಾಗಿದ್ದಾರೆ. ಕೃಷಿಕರ ಕಲ್ಯಾಣಕ್ಕಾಗಿ ಕಳೆದ 7 ವರ್ಷಗಳಲ್ಲಿ ವಿದ್ಯುತ್ ನಿಂದ ಮಾರುಕಟ್ಟೆವರೆಗೆ ವಿವಿಧ ಸೌಲಭ್ಯಗಳ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಹಸಿರು ಕ್ರಾಂತಿಯಲ್ಲಿ ಕೀಟನಾಶಕಗಳು, ರಾಸಾಯನಿಕ ಔಷಧಿಗಳ ಪಾತ್ರ ಮಹತ್ವದ್ದಾಗಿತ್ತು. ಆದರೆ ಅವು ಸೃಷ್ಟಿಸಿದ ಅವಾಂತರಗಳ ಕುರಿತು ಸಹ ನಾವು ಗಮನ ನೀಡಬೇಕು. ನೈಸರ್ಗಿಕ ಕೃಷಿ ವಿಧಾನ ಅನುಸರಿಸುವುದರಿಂದ ಹಲವು ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಭೂಮಿ ಸಮೃದ್ಧವಾಗುತ್ತದೆ. ನೀರಿನ ಅಗತ್ಯವೂ ಕಡಿಮೆಯಾಗುತ್ತದೆ ಎಂದರು.