ಟಾಪ್ ಸಿನಿಮಾ ಸುದ್ದಿಗಳು : LATEST UPDATES

1 min read

ಟಾಪ್ ಸಿನಿಮಾ ಸುದ್ದಿಗಳು : LATEST UPDATES

ಹಿರಿಯ ನಟ ಜಗ್ಗೇಶ್ ಗೆ ಅವಮಾನ : ಒಳ್ಳೆ ಹುಡುಗ ಪ್ರಥಮ್ ಆಕ್ರೋಶ..!

ಹಿರಿಯ ನಟ ಜಗ್ಗೇಶ್ ಗೆ ಅವಮಾನ : ಒಳ್ಳೆ ಹುಡುಗ ಪ್ರಥಮ್ ಆಕ್ರೋಶ..!

ನವರಸನಾಯಕ ಜಗ್ಗೇಶ್ ಚಿತ್ರೀಕರಣದಲ್ಲಿ ಬಾಗಿಯಾಗಿದ್ದಾಗಲೇ ದರ್ಶನ್ ಅಭಿಮಾನಿಗಳು ಬಂದು ಜಗ್ಗೇಶ್ ಅವರ ಜೊತೆಗೆ ಗಲಾಟೆ ಮಾಡಿ ಅವಮಾನ ಮಾಡಿದ್ದ ಘಟನೆಯನ್ನ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಥಮ್, ‘ಜಗ್ಗೇಶ್ ಸರ್ ಅಷ್ಟು ವಿನಮ್ರವಾಗಿ ನಾನು ಹೇಳಿಲ್ಲ ಅಂತ ಕೇಳಿಕೊಳ್ಳುತ್ತಿದ್ದರೂ ಕನಿಷ್ಟ ಅವರ ಹಿರಿತನಕ್ಕಾದರೂ ಗೌರವ ಕೊಡಬೇಕಿತ್ತು’. ಈಗಿನ ಕುಲಗೆಟ್ಟ ಮುಂದುವರೆದ ತಂತ್ರಜ್ಞಾನದಲ್ಲಿ ಆಡಿಯೋ ಎಡಿಟ್ ಮಾಡಿ ತಿರುಚೋದು ದೊಡ್ಡ ವಿಚಾರನಾ? ಒಂದು ವೇಳೆ ಆಕಸ್ಮಾತ ಜಗ್ಗೇಶ್ ಅವರು ಏನಾದ್ರೂ ಹಾಗೆ ಹೇಳಿಲ್ಲದಿದ್ರೆ ಇವತ್ತಿನ ಅಗೌರಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.

ಪೊಗರು ಪ್ರಚಾರ ಮಾಡದೇ ಅಸಡ್ಡೆ ತೋರಿದ ರಶ್ಮಿಕಾ ವಿರುದ್ಧ ಕನ್ನಡಿಗರ ಆಕ್ರೋಶ..!

ಪೊಗರು ಪ್ರಚಾರ ಮಾಡದೇ ಅಸಡ್ಡೆ ತೋರಿದ ರಶ್ಮಿಕಾ ವಿರುದ್ಧ ಕನ್ನಡಿಗರ ಆಕ್ರೋಶ..!

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡಿದ್ರು. ನಂತರ ತೆಲುಗು ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇನ್ನೂ ಹಲವಾರು ಪ್ರಾಜೆಕ್ಟ್ ಗಳು ಅವರ ಕೈಲಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಲ್ಲಿ ಹೊಸ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ರಶ್ಮಿಕಾ. ಆದ್ರೆ ಕನ್ನಡದವರೇ ಆದ್ರೂ ಕನ್ನಡ ಸಿನಿಮಾ ಮೂಲಕವೇ ಫೇಮಸ್ ಆದ್ರೂ ಕನ್ನಡಕ್ಕೆ ಅವಮಾನ, ಕನ್ನಡವನ್ನ ತಾತ್ಸಾರ ಕನ್ನಡದ ಅವಹೇಳನ ಮಾಡುತ್ತಲೇ ಕನ್ನಡಿಗರ ಪಾಲಿಗೆ ತಾತ್ಸಾರವಾದ ನಟಿ ಕೂಡ ರಶ್ಮಿಕಾನೆ. ಕನ್ನಡದವರಿಗೆ ರಶ್ಮಿಕಾ ಮೇಲೆ ಅಭಿಮಾನಕ್ಕಿಂತ ಹೆಚ್ಚು ಕೋಪವೇ ಇದೆ. ಇದಕ್ಕೆ ಕಾರಣ ಖುದ್ದು ರಶ್ಮಿಕಾ. ಒಟ್ನಲ್ಲಿ ಸದಾ ಕಾಂಟ್ರವರ್ಸಿ ಟ್ರೋಲ್ ಗಳಿಂದಲೇ ಫೇಮ್ ನಲ್ಲಿರುವ ರಶ್ಮಿಕಾ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ : ಚಿತ್ರದ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ : ಚಿತ್ರದ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆ ದಿನದಿಂದಲೂ ಬ್ಲಾಕ್ ಬಸ್ಟರ್ ಟಾಕ್ ಪಡೆದುಕೊಂಡು ಗಲ್ಲಾಪಟ್ಟಿಗೆ ದೋಚುತ್ತಿದೆ. ಮೂರು ಭಾಷೆಗಳಲ್ಲಿ ರಿಲೀಸ್ ಆಗಿರುವ ಪೊಗರು ಚಿತ್ರಕ್ಕೆ ಎಲ್ಲಾ ಭಾಷೆಗಳಲ್ಲೂ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಸದ್ಯ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುತ್ತಿರುವ ಪೊಗರು ಸಿನಿಮಾಗೆ ವಿವಾದಗಳೂ ಕೂಡ ಸುತ್ತಿಕೊಳ್ಳುತ್ತಿವೆ.

ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಬ್ರಾಹ್ಮಣ ಸಮುದಾಯದವರು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. ಅಲ್ಲದೇ ಸಿನಿಮಾದಲ್ಲಿರುವ ಆ ದೃಶ್ಯಗಳಿಗೆ ಕತ್ತರಿ ಹಾಕಬೇಕು ಅಂತಾ ಒತ್ತಾಯಿಸಿದ್ದಾರೆ. ಈ ಮಧ್ಯೆ ಈ ಬಗ್ಗೆ ಸುದ್ದಿ ಮಾಧ್ಯಮದ ಜೊತೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪೆÇಗರು ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಮಾಸ್ಕ್ ಧರಿಸದ ಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೋಲಿಸರನ್ನು ಒತ್ತಾಯಿಸಿದ ನೆಟ್ಟಿಗರು

ಮಾಸ್ಕ್ ಧರಿಸದ ಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೋಲಿಸರನ್ನು ಒತ್ತಾಯಿಸಿದ ನೆಟ್ಟಿಗರು

ಮುಂಬೈ, ಫೆಬ್ರವರಿ23: ಮಾಸ್ಕ್ ಧರಿಸದೆ ಕಂಗನಾ ರಣಾವತ್‌ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುವುದು ಹೊಸತಲ್ಲ. ಸೆಪ್ಟೆಂಬರ್‌ನಲ್ಲಿ ತನ್ನ ಕಚೇರಿಯನ್ನು ನೆಲಸಮ ಮಾಡಿದ ಬಿಎಂಸಿ ಕಚೇರಿಗೆ ಭೇಟಿ ನೀಡಿದಾಗ ಕೂಡ ಮಾಸ್ಕ್ ಧರಿಸಿರಲಿಲ್ಲ. ಈಗ ಮತ್ತೊಮ್ಮೆ ಮಾಸ್ಕ್ ಇಲ್ಲದೇ ಸಾರ್ವಜನಿಕವಾಗಿ ಕಂಗನಾ ಕಾಣಿಸಿಕೊಂಡಿದ್ದು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್‌ ಅವರು ಇತ್ತೀಚೆಗೆ ತಮ್ಮ ಆಕ್ಷನ್ ಚಿತ್ರ ‘ಧಕಾಡ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಭಾನುವಾರ ಸಂಜೆ ಮುಂಬೈಗೆ ಆಗಮಿಸಿದರು. ವಿಮಾನ ನಿಲ್ದಾಣದಿಂದ ‌ತನ್ನ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರು ಮಾಸ್ಕ್ ಇಲ್ಲದೇ ಕಾಣಿಸಿಕೊಂಡಿದ್ದು, ನೆಟ್ಟಿಗರು ಕೋವಿಡ್-19 ನಿಯಮಗಳನ್ನು ಏಕೆ ಉಲ್ಲಂಘಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅವರಲ್ಲಿ ಕೆಲವರು ಮುಂಬೈ ಪೊಲೀಸರು ಆಕೆಯ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಚಲನ್ ನೀಡುವಂತೆ ಒತ್ತಾಯಿಸಿದ್ದಾರೆ.

`ನಾವು ಸತ್ತ ಮೇಲೆ ನಮ್ಮ ತಿಥಿ ಮಾಡಿ ಸಂತೋಷ ಪಡಿ’ : ಜಗ್ಗೇಶ್ ಬೇಸರ

`ನಾವು ಸತ್ತ ಮೇಲೆ ನಮ್ಮ ತಿಥಿ ಮಾಡಿ ಸಂತೋಷ ಪಡಿ’ : ಜಗ್ಗೇಶ್ ಬೇಸರ

ಬೆಂಗಳೂರು : ನಿನ್ನೆ ನವರಸ ನಾಯಕ ಜಗ್ಗೇಶ್ ಅವರಿಗೆ ನಟ ದರ್ಶನ್ ರ ಕೆಲ ಅಭಿಮಾನಿಗಳು ಮುತ್ತಿಗೆ ಹಾಕಿದ ವಿಚಾರ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಡಿಯೋ ಕ್ಲಿಪ್ ಸಂಬಂಧ ಈ ಹಿಂದಯೇ ಜಗ್ಗೇಶ್ ಅವರು ಸ್ಪಷ್ಟನೆ ನೀಡಿದ್ದರೂ, ನಿನ್ನೆ ದರ್ಶನ್ ಅವರ ಕೆಲ ಅಭಿಮಾನಿಗಳು ಅವರಿಗೆ ಮುತ್ತಿಗೆ ಹಾಕಿ ಕ್ಷೆಮ ಕೇಳುವಂತೆ ಒತ್ತಾಯಿಸಿ, ಕನಿಷ್ಠ ಹಿರಿಯ ನಟನಿಗೆ ಕೊಡಬೇಕಾದ ಗೌರವವನ್ನೂ ಕೊಡದೇ ತರಾಟೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಸಂಬಂಧ ಜಗ್ಗೇಶ್ ಅವರು ಟ್ವಿಟ್ಟರ್ ನಲ್ಲಿ ಬೇಸರ ಹೊರಹಾಕಿದ್ದಾರೆ.

ಅವರ ಟ್ವೀಟ್ ನಲ್ಲಿ , ಆತ್ಮೀಯರೆ ನನಗೆ ನೀವು ನಿಮಗೆ ನಾನು, ಇನ್ನು ಮುಂದಿನ ದಿನಗಳಲ್ಲಿ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಟಿವಿ ಶೋಗಳಿಗೆ ಮಾತ್ರ ಬದುಕು ಮೀಸಲು ಇಡುತ್ತೇನೆ. ತುಂಬ ತಾಮಸವಾಗಿದೆ ನನಗೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ಅಂತ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd