ಗಾಯಕಿ ಲತಾ ಮಂಗೇಶ್ಕರ್ ಗೆ ಕರೋನಾ ಪಾಸಿಟಿವ್ – ಆಸ್ಪತ್ರೆಗೆ ದಾಖಲು
ಭಾರತದ ನೈಟಿಂಗೇಲ್ ಎಂದೇ ಪ್ರಸಿದ್ದಿ ಪಡೆದಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ.
COVID-19 ಟೆಸ್ಟ್ ನಲ್ಲಿ ಪಾಸಿಟೀವ್ ಪರೀಕ್ಷೆ ಬಂದ ನಂತರ, 92 ವರ್ಷದ ಲತ ಮಂಗೇಶ್ಕರ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.
ಈ ಕುರಿತು ಅವರ ಸೊಸೆ ರಚನ ಎ ಎನ್ ಐ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಲಘು ರೋಗ ಲಕ್ಷಣಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.