ಮುಂಬಯಿ: ಲೈವ್ ಸೆಕ್ಸ್ ಶೋ ನಡೆಸುತ್ತಿದ್ದ ಇಬ್ಬರು ನಟಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಆ್ಯಪ್ ಮೂಲಕ ಲೈವ್ ಸೆಕ್ಸ್ ಶೋ (Live Sex Show) ನಡೆಸುತ್ತಿದ್ದ ಇಬ್ಬರು ನಟಿಯರು ಸೇರಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬಯಿನ ಪೊಲೀಸರಿಂದ ಈ ಪ್ರಕರಣ ಬಯಲಿಗೆ ಬಂದಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿನ Pihu Official App ಹೆಸರಿನ ಮೂಲಕ ಈ ದಂಧೆ ನಡೆಸುತ್ತಿದ್ದರು ಎನ್ನಲಾಗಿದ್ದು, ಲೈವ್ ಶೋಗೆ ಗ್ರಾಹಕರಿಂದ 1 ಸಾವಿರ ರೂ. ನಿಂದ ಆರಂಭವಾಗಿ 10 ಸಾವಿರ ರೂ. ವರೆಗೆ ಶುಲ್ಕ ಪಾವತಿಸಲಾಗುತ್ತಿತ್ತು ಎನ್ನಲಾಗಿದೆ.
ಖಚಿತ ಮಾಹಿತಿಯಿಂದ ವೆರ್ಸೋವಾ ಪೊಲೀಸರು ವರ್ಸೋವಾದಲ್ಲಿದ್ದ ನಿವಾಸದ ಮೇಲೆ ದಾಳಿ ನಡೆಸಿ ತನಿಶಾ ರಾಜೇಶ್ ಕನೋಜಿಯಾ(20), ತಮನ್ನಾ ಆರಿಫ್ ಖಾನ್ (34) ರುದ್ರ ನಾರಾಯಣ ರಾವುತ್(27) ಬಂಧಿಸಿ, ತನಿಖೆ ನಡೆಸಲಾಗುತ್ತಿದೆ.