ಹಲ್ಲಿಯೊಂದು ಬಾಯಿಯೊಳಗೆ ನುಗ್ಗಿದ ಪರಿಣಾಮ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಛತ್ತೀಸಗಢದ ಕೊರ್ಬಾದಲ್ಲಿ ನಡೆದಿದೆ.
ಹಲ್ಲಿಗೆ ಮನುಷ್ಯನನ್ನು ಸಾಯಿಸುವಷ್ಟು ವಿಷ ಇರುವುದಿಲ್ಲ. ಇದಕ್ಕೆ ಬೇರೆ ಕಾರಣ ಇರಬಹುದು ಎಂಬುವುದು ವೈದ್ಯರ ಅನುಮಾನವಾಗಿದೆ. ಹಲ್ಲಿ ಕೂಡ ಮಗುವಿನ ಬಾಯಿಯಲ್ಲಿಯೇ ಸಾವನ್ನಪ್ಪಿದ್ದು, ಅಚ್ಚರಿ ಉಂಟು ಮಾಡಿದೆ.
ಕೊರ್ಬಾ ಜಿಲ್ಲೆಯ ಸುಮೇಧಾ ನಾಗಿನ್ ಬಂಥ ಗ್ರಾಮದಲ್ಲಿ ಈ ಅಚ್ಚರಿ ಘಟಿಸಿದೆ. ಮಲಗಿದ್ದ ಸಂದರ್ಭದಲ್ಲಿ ಮಗುವಿನ ಬಾಯಿಯಿಯಲ್ಲಿ ಹಲ್ಲಿ ಇರುವುದನ್ನು ತಾಯಿ ಕಂಡಿದ್ದಾಳೆ. ಕಿರುಚಿದ ಆಕೆ ತಕ್ಷಣವೇ ಅದನ್ನು ಹೊರಗೆಳೆದು ಬಿಸಾಡಿದ್ದಾಳೆ. ಮಗುವನ್ನು ಎಲ್ಲಿಸಲು ಯತ್ನಿಸಿದಾಗ ಅದು ನಿಸ್ತೇಜವಾಗಿತ್ತು ಎನ್ನಲಾಗಿದೆ.
ಮಗುವನ್ನು ಕೋಣೆಯಲ್ಲಿ ಮಲಗಿಸಲಾಗಿತ್ತು. ತಾಯಿ ಬಂದು ನೋಡಿದಾಗಲೇ ಘಠನೆ ನಡೆದಿರುವುದು ತಿಳಿದು ಬಂದಿದೆ. ಹಲ್ಲಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದರು. ಮಗುವಿನ ಬಾಯಿಗೆ ಹಲ್ಲಿ ಹೇಗೆ ಹೋಯಿತು ಎಂಬುವುದೇ ತಿಳಿಯದಾಗಿದೆ. ಹಲ್ಲಿಯ ವಿಷದಿಂದ ಮಗು ಸಾವನ್ನಪ್ಪಿದೆಯೇ? ಅಥವಾ ಮಗುವಿನ ಸಾವಿಗೆ ಬೇರೆ ಏನಾದರೂ ಕಾರಣ ಇದೆಯೇ ಎಂದು ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ವರದಿಯ ನಂತರ ಸತ್ಯಾಂಶ ತಿಳಿದು ಬರಲಿದೆ.