ಲವ್ ಜಿಹಾದ್ ಮಾಡೋರ ಕಾಲು ಮುರೀಬೇಕು: ಸಚಿವ ಕೆ.ಎಸ್ ಈಶ್ವರಪ್ಪ ಸಿಟ್ಟೇಕೆ..!
1 min read
ಚಿಕ್ಕಮಗಳೂರು: ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮರಳು ಮಾಡಿ ನಡುನೀರಲ್ಲಿ ಕೈಬಿಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ, ಹಿಂದೂ ಹೆಣ್ಣು ಮಕ್ಕಳೇನು ಬಿಕಾರಿಗಳಲ್ಲ. ಲವ್ ಜಿಹಾದ್ ಮಾಡೋರ ಕಾಲು ಮುರೀಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಡೆದ ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ವಿರುದ್ಧದ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡುವುದು ನಿಶ್ಚಿತ. ಇಂತಹ ಕೃತ್ಯ ಎಸಗುವವರನ್ನು ಜೈಲಿಗೆ ಕಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನು ಬಿಜೆಪಿ ದೂರವೇ ಇಟ್ಟಿದೆ ಎಂದು ಹೇಳಿ ಕಾಂಗ್ರೆಸ್ ಹಾಳಾಗಿ ಹೋಗಿದೆ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಲ್ಲಿ ಎಲ್ಲರೂ ಕೆಟ್ಟವರಿಲ್ಲ. ಆದರೆ, ಕೆಲವರು ಮಾಡುವ ನೀಚ ಕೃತ್ಯದಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ತ್ರಿವಳಿ ತಲಾಕ್ ನಿಷೇಧ ಮಾಡಲಾಗಿದ್ದು, ಕೆಲ ರಾಷ್ಟ್ರಘಾತುಕರಿಂದ ಅಲ್ಪಸಂಖ್ಯಾತರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಏನಾದರೂ ತಿಂದ ಸಾಯಲಿ…
ರಾಮ ಇಲ್ಲೇ ಹುಟ್ಟಿದ್ದಾನೆ ಎನ್ನಲು ಸಾಕ್ಷಿ ಏನಿದೆ ಎಂದು ಕೇಳುತ್ತಿದ್ದರು. ಕಾಂಗ್ರೆಸ್‍ನವರು ರಾಮಮಂದಿರ ಕಟ್ಟಲು ಬಿಡಲ್ಲ ಎನ್ನುತ್ತಿದ್ದರು. ಆದರೆ, ಮೋದಿ ಅವರಿಂದ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು.
ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಹನುಮ ಜಯಂತಿ ದಿನ ಕೋಳಿ ಮಾಂಸ ತಿನ್ನುತ್ತಾರೆ. ಸಿದ್ದರಾಮಯ್ಯ ಏನಾದರೂ ತಿಂದ ಸಾಯಲಿ. ನಮಗೆ ಸಂಬಂಧ ಇಲ್ಲ. ಪೂಜಿಸುವ ಗೋವುಗಳನ್ನು ಹತ್ಯೆ ಮಾಡುವುದನ್ನು ನಿಷೇಧಿಸಲು ಬಿಜೆಪಿ ಸರ್ಕಾರವೇ ಬರಬೇಕಿತ್ತಾ ? ಕಾಂಗ್ರೆಸ್‍ನವರೇ ಮಾಡಬಹುದಿತ್ತಲ್ಲವೇ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel